Jun 30, 2022, 6:49 PM IST
ಮಂಗಳೂರು (ಜೂನ್ 30): ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮಂಗಳೂರು ಹೆದ್ದಾರಿ (Bengaluru Mangaluru National Highway) ಸಂಪೂರ್ಣವಾಗಿ ಜಲಾವೃತವಾಗಿ ಬ್ಲಾಕ್ ಆಗಿದೆ.
ಮಂಗಳೂರಿನ ಪಡೀಲ್ ರಸ್ತೆ (Padil Road) ನೀರಿನಿಂದ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹಾಗಿದ್ದರೂ ಈವರೆಗೂ ಅಧಿಕಾರಿಗಳು ಈ ಕಡೆ ತಲೆಹಾಕಿಲ್ಲ. ಭಾರೀ ಮಳೆಗೆ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ದಕ್ಷಿಣ ಕನ್ನಡದಲ್ಲಿ ಅವಾಂತರ ಸೃಷ್ಟಿಯಾಗಿದೆ.
Karnataka Coastal Districts Rain; ಮಹಾಮಳೆಗೆ ಬೆಚ್ಚಿಬಿದ್ದ ಕರಾವಳಿ, ರೈಲು ಸಂಚಾರ ಬಂದ್!
ಪಡೀಲ್ ರಸ್ತೆ ಸಂಪೂರ್ಣವಾಗಿ ನೀರಿನಲ್ಲಿ ತುಂಬಿಹೋಗಿದ್ದು, ಅದು ರಸ್ತೆಯೋ ಕರೆಯೋ ಎನ್ನುವ ಅನುಮಾನ ಕಾಡಿದೆ. ರಸ್ತೆ ಕಾಣದೆ ವಾಹನ ಸವಾರರು ಆತಂಕದಲ್ಲಿ ವಾಹನವನ್ನು ಓಡಿಸುತ್ತಿದ್ದಾರೆ. ಸಾಕಷ್ಟು ತಗ್ಗು ಪ್ರದೇಶಗಳ ಮನೆಗಳಲ್ಲಿ ನೀರು ನುಗ್ಗಿದೆ.