ಎಚ್​ಎಂಟಿ ಸಂಸ್ಥೆ ಭೂಮಿಗಾಗಿ ರಾಜ್ಯ ಸರ್ಕಾರ vs ಕೇಂದ್ರ ಜಟಾಪಟಿ!

Aug 13, 2024, 11:23 PM IST

ಬೆಂಗಳೂರು (ಆ.13): ಎಚ್​ಎಂಟಿ ಸಂಸ್ಥೆ ಭೂಮಿಗಾಗಿ ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರದ ಯುದ್ಧ ಆರಂಭವಾಗಿದೆ. 599 ಏಕರೆ ವಾಪಸ್ ಪಡೆಯಲು ರಾಜ್ಯ ಸರ್ಕಾರ ಸೂಚನೆ ಹೊರಡಿಸಿದ ಬೆನ್ನಲ್ಲಿಯೇ, ಎಚ್​​ಡಿಕೆ, ಈಶ್ವರ ಖಂಡ್ರೆ ಮಧ್ಯೆ ಎಚ್‌ಎಂಟಿ ಭೂ ಯುದ್ಧ ಆರಂಭವಾಗಿದೆ. 

ಎಚ್​ಎಂಟಿ ಬಳಿ ಪೀಣ್ಯ, ಜಾಲಹಳ್ಳಿ  ಬಳಿ 599 ಎಕರೆ ಭೂಮಿಯಿದೆ. 1878ರ ಸೆಕ್ಷನ್ 9ರಡಿ ಈ ಭೂಮಿ ಅರಣ್ಯ ಎಂದು ಘೋಷಣೆಯಾಗಿದೆ. ಆದರೆ ಈ ಜಾಗವನ್ನ ಖಾಸಗಿಯವರಿಗೆ ಮಾರಲು ಸಂಸ್ಥೆ ಮುಂದಾಗುತ್ತಿದೆ. 599 ಎಕರೆ ಪೈಕಿ 281 ಎಕರೆ ಜಮೀನು ಕೂಡಲೇ ವಶಕ್ಕೆ ಪಡೆಯಬೇಕು. ನಂತರ ಹಂತ ಹಂತವಾಗಿ ಉಳಿದ ಜಮೀನು ವಶಕ್ಕೆ ಪಡೆಯಬೇಕು. ಅರಣ್ಯ ಭೂಮಿಯನ್ನೂ ಎಚ್​ಎಂಟಿ ಸಂಸ್ಥೆಗೆ ದಾನವಾಗಿ ನೀಡಲು ಅಸಾಧ್ಯ. ಅಷ್ಟೇ ಅಲ್ಲದೇ ದಾನವಾಗಿ ನೀಡಿದ್ದ ಬಗ್ಗೆಯೂ ಗೆಜೆಟ್​ ಅಧಿಸೂಚನೆ ಇಲ್ಲ. ಹೀಗಾಗಿ ಭೂಮಿ ವಶಕ್ಕೆ ಕಾನೂನು ಕ್ರಮ ವಹಿಸಲು ಸಚಿವರಿಂದ ಸೂಚನೆ ನೀಡಲಾಗಿದೆ.

 

ಬೆಂಗಳೂರು ಹೆಚ್‌ಎಂಟಿ ಸಂಸ್ಥೆ ಬಳಿಯಿದ್ದ 469 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಸಚಿವ ಈಶ್ವರ ಖಂಡ್ರೆ ಆದೇಶ

ಯಾವ ಕಾರಣಕ್ಕೆ.? ಅರಣ್ಯ ಇಲಾಖೆ  HMT ಭೂಮಿಯನ್ನು ವಶಕ್ಕೆ ಪಡೆಯಲು ಸೂಚನೆ ಕೊಟ್ಟಿದ್ದಾರೆ. ಸೂಚನೆ ಕೊಟ್ಟ ತಕ್ಷಣ ವಶಕ್ಕೆ ಪಡೆಯಲು ಆಗುತ್ತಾ.? ಡಿ ನೋಟಿಫಿಕೇಷನ್ ಯಾರು ಮಾಡಿದ್ದು.? ನಿಮಗೆ ಈ ಭೂಮಿ ಮೇಲೆ ಯಾಕೆ ಅನುಮಾನ ಶುರು ಆಯ್ತು? ನಾನು ಯಾವಾಗ ಈ ಸಂಸ್ಥೆ ಗೆ  ಭೇಟಿ ಕೊಟ್ಟು ಹೊಸ ರೂಪ ಕೊಡಲು ಆರಂಭ ಮಾಡಿದ್ದೆನೋ ಆಗಿನಿಂದ ಇದೆಲ್ಲಾ ಶುರು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.