Jun 10, 2020, 2:31 PM IST
ಬೆಂಗಳೂರು (ಜೂ. 10): ಮದುವೆ ಸಂಭ್ರಮಕ್ಕೆ ಕಿಲ್ಲರ್ ಕೊರೊನಾ ಕಿಚ್ಚು ಹೊತ್ತಿಸಿದೆ. ಮಗಳ ಮದುವೆ ನೋಡಬೇಕಿದ್ದ ತಂದೆಗೆ ಬರಸಿಡಿಲು ಬಡಿದಂತಾಗಿದೆ. ನಾಳೆ ಮಗಳ ಮದುವೆ ನೋಡಬೇಕಿದ್ದ ತಂದೆಗೆ ಕೊರೊನಾ ತಗುಲಿದೆ. ಯಾದಗಿರಿ ತಾಲೂಕಿನಲ್ಲಿರುವ ಅಲ್ಲಿಪೂರಾ ತಾಂಡದಲ್ಲಿ ಈ ಘಟನೆ ನಡೆದಿದೆ.
ಯಾದಗಿರಿ: ಆರೋಗ್ಯ ಸಚಿವರೇ ಇಲ್ನೋಡಿ, ಇದು ಮನುಷ್ಯರು ತಿನ್ನೋ ಊಟಾನಾ..?
ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ಪಾಸಿಟೀವ್ ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಧುವನ್ನು ಹೋಂ ಕ್ವಾರಂಟೈನ್ನಲ್ಲಿಡಲಾಗಿದೆ. ಅಲ್ಲಿಪುರದಲ್ಲಿ 11 ಜನರಿಗೆ ಡೆಡ್ಲಿ ವೈರಸ್ ವಕ್ಕರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!