Shivamogga: ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಆಗಬಾರದು, ಸೂಕ್ತ ತನಿಖೆಗೆ ಡಿಕೆಶಿ ಆಗ್ರಹ

Feb 21, 2022, 1:54 PM IST

ಬೆಂಗಳೂರು (ಫೆ. 21): ಹಿಂದೂಪರ ಕಾರ್ಯಕರ್ತನೊಬ್ಬನನ್ನು (Right Wing Activist) ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. 

Right-Wing Activist Murder: ಹಂತಕರ ಸುಳಿವು ಸಿಕ್ಕಿದೆ, ಹೆಡೆಮುರಿ ಕಟ್ತೇವೆ: ಗೃಹ ಸಚಿವ

'ಮಾಧ್ಯಮಗಳಲ್ಲಿ ನೋಡಿ ವಿಚಾರ ತಿಳಿದುಕೊಂಡೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಆಗಬಾರದು. ಶಿವಮೊಗ್ಗದಲ್ಲಿ ಶಾಂತಿ ಕಾಪಾಡಬೇಕು. ನಿಷೇಧಾಜ್ಞೆ ಜಾರಿಯಾಗಬೇಕು. ಘಟನೆ ಬಗ್ಗೆ ಸೂಕ್ತ ತನಿಖೆಗೆ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.