Apr 23, 2022, 11:34 AM IST
ದಾವಣಗೆರೆ (ಏ. 23): ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrutha Mahothsava) ಅಂಗವಾಗಿ ಇಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ ಸಮಾಜದವರ ಪಾತ್ರ ಮತ್ತು ವೀರ ಸೇನಾನಿಗಳಿಗೆ ಗೌರವ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ.
PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು
ಏ.24ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ಮಠದ ಆವರಣದಲ್ಲಿ ನಿರಾಣಿ ಫೌಂಡೇಶನ್, ಜಿಲ್ಲಾ ಕೈಗಾರಿಕಾ ಕೇಂದ್ರ, ಎಥ್ನೋಟೆಕ್ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ವಿಪ್ರೋ, ಇಸ್ಫೋಸಿಸ್, ಟಾಟಾ ಮೋಟರ್ಸ್, ಜೆಎಸ್‌ಡಬ್ಲೂ ಸೇರಿ 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.
ಅಂದು ಮಧ್ಯಾಹ್ನ 3 ಗಂಟೆಗೆ ಪೀಠದ ವಚನಾನಂದ ಶ್ರೀಗಳ 4ನೇ ವರ್ಷದ ಪೀಠರೋಹಣ ಮಹೋತ್ಸವ ನಡೆಯಲಿದ್ದು, ಆದಿಚುಂಚನಗಿರಿಶ್ರೀ, ಪೇಜಾವರ ಶ್ರೀ, ಜೈನ ಸಮುದಾಯದ ಲೋಕೇಶ್ ಮುನಿಗಳು ಮತ್ತು ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.