Jul 16, 2021, 1:18 PM IST
ಬೆಂಗಳೂರು (ಜು. 16): ಖ್ಯಾತ ನಟ ದರ್ಶನ್ ಅವರ ಹೆಸರಿನಲ್ಲಿ ವಂಚನೆ ಯತ್ನ ಪ್ರಕರಣದ ಸುದ್ದಿ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್ ಹಾಗೂ ಅವರ ಹಿಂಬಾಲಕರು ದಲಿತ ಹೋಟೆಲ್ ಸಿಬ್ಬಂದಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.
'ಇಡೀ ರಾತ್ರಿ ದೊಡ್ಡ ಘಟನೆಯಾಗಿದೆ, ಹಲ್ಲೆಗೊಳಗಾದ ವ್ಯಕ್ತಿಯ ಕೆಲಸ ಬಿಡಿಸಿದ್ದಾರೆ'
ಹಲ್ಲೆಯಿಂದ ನೌಕರನ ಕಣ್ಣಿಗೆ ಏಟಾಗಿದೆ. ನನ್ನಲ್ಲಿ ಸಾಕ್ಷಿಯಿದೆ ಎಂದು ಇಂದ್ರಜಿತ್ ಹೇಳಿದ್ದಾರೆ. ಇನ್ನೊಂದು ಕಡೆ ದರ್ಶನ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ. ಇಡೀ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ. ಸುಳ್ಳು ಹೇಳುತ್ತಿರುವುದು ದರ್ಶನ್ನಾ.? ಇಂದ್ರಜಿತ್ತಾ.? ಹೈ ಪ್ರೊಫೈಲ್ ಕೇಸ್‌ಗಳಲ್ಲಿ ಕಾಣಿಸಿಕೊಳ್ಳೋದೇಕೆ ಇಂದ್ರಜಿತ್..? ಇಲ್ಲಿದೆ ಹೆಚ್ಚಿನ ಡಿಟೇಲ್ಸ್..!