May 27, 2020, 6:34 PM IST
ಬೆಂಗಳೂರು(ಮೇ.27): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಆರ್ಭಟ ಮಿತಿ ಮೀರುತ್ತಲೇ ಇದೆ. ಇದೀಗ ರಾಜ್ಯದ 10 ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.
ಇಂದು ಒಂದೇ ದಿನ 122 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬಾಂಬೆಯಿಂದ ವಾಪಾಸಾದ 12 ಜನರಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆಯಲ್ಲಿ ಬೀದರ್ ಶತಕದ ಗಡಿ ದಾಟಿದೆ.
ಬೆಂಗಳೂರು ಪೊಲೀಸರ ನೆರವಿಗೆ ನಿಂತ ಕ್ರಿಕೆಟಿಗ ಅನಿಲ್ ಕುಂಬ್ಳೆ; 1 ಸಾವಿರ ಸೇಫ್ಟಿ ಕಿಟ್ ವಿತರಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವಾದ ಇಂದು 11 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಬೆಳಗಾವಿಯಲ್ಲಿ ಎರಡು ವರ್ಷದ ಮಗುವಿಗೂ ಕೊರೋನಾ ಅಪ್ಪಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.