Nov 30, 2021, 2:00 PM IST
ಹಾಸನ (ನ. 30): ಎಲ್ಲರೂ ಕೊರೊನಾ ಲಸಿಕೆ (Corona Vaccination) ಪಡೆಯುವಂತೆ ಮಾಡಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಎಲ್ಲಾ ಕಡೆ ಕೊರೋನಾ ಲಸಿಕೆ ಪೂರೈಕೆಯನ್ನೂ ಮಾಡುತ್ತಿದೆ. ಎಲ್ಲಾ ಕಡೆ ಕೊರೋನಾ ಲಸಿಕೆ ಹಾಕಲಾಗುತ್ತಿದೆ. ಆದರೆ ಜನ ಮಾತ್ರ ನಿರುತ್ಸಾಹ ತೋರಿಸುತ್ತಿದ್ದಾರೆ. ಹಾಸನ (hassan) ಜಿಲ್ಲೆಯಲ್ಲಿ ಕಳೆದ 2 ತಿಂಗಳಲ್ಲಿ 23 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ 21 ಮಂದಿ ವ್ಯಾಕ್ಸಿನ್ (Vaccine) ಪಡೆದಿರಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಹಾಸನದಲ್ಲಿ ಮೊದಲ ಡೋಸ್ ಶೇ. 92 ರಷ್ಟು ಮಂದಿ ಪಡೆದಿದ್ದಾರೆ. 2 ನೇ ಡೋಸ್ ಶೇ. 56 ರಷ್ಟು ಪಡೆದಿದ್ದಾರೆ.