54 ಸಾವಿರ ರಿಪೋರ್ಟ್ ಬಾಕಿ; ರೈಲುಗಳ ಎಂಟ್ರಿ: ಕ್ವಾರಂಟೈನ್ ನಿಯಮ ಸಡಿಲಿಕೆ ಯಾಕೆ?

Jun 4, 2020, 1:33 PM IST

ಬೆಂಗಳೂರು (ಜೂ. 04): ಕ್ವಾರಂಟೈನ್ ನಿಯಮದಲ್ಲಿ ಮತ್ತೆ ಬದಲಾವಣೆಯಾಗಿದೆ. ರಾಜ್ಯದಲ್ಲಿ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಿದ್ದರೂ ಸರ್ಕಾರ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಿದೆ. ಕ್ವಾರಂಟೈನ್ ನಿಯಮದಲ್ಲಿ ಸಡಿಲಿಕೆ ಮಾಡಿ ಮಹಾಮಾರಿಯನ್ನು ಮನೆಗೆ ಬಿಟ್ಟು ಕೊಳ್ಳಲು ಅವಕಾಶ ನೀಡಿದಂತಾಗಿದೆ. ಇದೀಗ ಮಹಾರಾಷ್ಟ್ರದಿಂದ ಬರುವವರಿಗೆ ಸರ್ಕಾರಿ ಕ್ವಾರಂಟೈನ್ ಇಲ್ಲ. ಮನೆಯಲ್ಲಿಯೇ 14 ದಿನ ಹೋಂ ಕ್ವಾರಂಟೈನ್ ಹಾಕಲಾಗಿದೆ. ಸೋಂಕು ಲಕ್ಷಣ ಇದ್ದವರಿಗೆ, ಅವಶ್ಯಕತೆ ಇದ್ದವರಿಗೆ ಮಾತ್ರ ಕೊರೊನಾ ಟೆಸ್ಟ್ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. 

ಏನಾಗುತ್ತೋ ಏನೋ!? 25 ಜಿಲ್ಲೆಗಳಿಂದ 35 ಸಾವಿರ ಜನರ ವರದಿ ನಿರೀಕ್ಷೆ

ರಾಜ್ಯದಲ್ಲಿ ಕೋವಿಡ್ 19 ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಹೊರರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ನಿಯಮ ಸಡಿಲಿಕೆ ಮಾಡುವುದು ಸಮಂಜಸವಲ್ಲ. ಸರ್ಕಾರ ಲಘುವಾಗಿ ಪರಿಗಣಿಸುತ್ತಿದೆಯಾ? ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿರ್ಧಾರ ಬಹುದೊಡ್ಡ ಆತಂಕಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ. ಇಷ್ಟು ದಿನದ ಎಲ್ಲಾ ಪ್ರಯತ್ನಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!