'ನಮ್ಮನ್ನು ಅಸ್ಪೃಶ್ಯರಂತೆ ಕಾಣ್ತಾರೆ'; ಕೊರೊನಾ ಗೆದ್ದ ಮಹಿಳೆಯ ಅಳಲು

Jul 9, 2020, 6:08 PM IST

ಬೆಂಗಳೂರು (ಜು. 09): ಕೊರೊನಾ ಗೆದ್ದವರನ್ನು ಅಸ್ಪೃಶ್ಯರಂತೆ ಕಾಣ್ತಾರೆ. ನಿಮ್ಮಿಂದಲೇ ಊರಿಗೆ ಕಂಟಕ ಎಂದು ಊರಿನವರು ಟೀಕಿಸುತ್ತಾರೆ' ಎಂದು ಕೊರೊನಾದಿಂದ ಗುಣಮುಖರಾದ ಚಾಮರಾಜನಗರದ ಬದನಗುಪ್ಪೆ ಮಹಿಳೆಯೊಬ್ಬಳು ಅಳಲು ತೋಡಿಕೊಂಡಿದ್ದಾರೆ. 

ರಾಜಧಾನಿ ರಕ್ಷಣೆಗೆ ' ಅಷ್ಟ ದಿಕ್ಪಾಲಕರು'; ಕೊರೊನಾ ತಡೆಗೆ ಸಿಎಂ ಹೊಸ ಪ್ಲಾನ್

' ವೈದ್ಯರಿಗೆ ಮಾನವೀಯತೆ ಇಲ್ಲ ಅನ್ನೋದು ತಪ್ಪು ಅಭಿಪ್ರಾಯ. ಅವರು ಆತ್ಮಬಲ ತುಂಬಿದ್ದರಿಂದಲೇ ಗುಣಮುಖಳಾಗಿದ್ದೇನೆ. ಅವರ ಸಹಕಾರ ಬಹಳ ದೊಡ್ಡದು' ಎಂದು ಈ ಮಹಿಳೆ ಹೇಳಿಕೊಂಡಿದ್ದಾರೆ.