ಸದ್ದಿಲ್ಲದೆ ನಗರಗಳಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್: ಮಹಿಳೆಯರ ಜೀವ ಹಿಂಡುತ್ತಿದೆ ಮಾರಕ ಖಾಯಿಲೆ..!

Aug 6, 2023, 4:53 PM IST

ನಗರೀಕರಣ ಹೆಚ್ಚಾಗುತ್ತಾ ಸಾಗಿದಂತೆ ಮನುಷ್ಯ ಸೋಂಬೇರಿಯಾಗಿದ್ದು ಸುಳ್ಳಲ್ಲ. ಈ ಸೋಂಬೇರಿತನದ ಜೊತೆ ಜೊತೆಗೆ ಎಂಜಾಯ್ಮೆಂಟ್ನ ಮೊರೆ ಹೋದವರು ಅನೇಕರಿದ್ದಾರೆ. ಮಹಿಳೆಯರೂ ಈ ಎಂಜಾಯ್ಮೆಂಟ್ ಹೆಸರಲ್ಲಿ ಅನೇಕ ಮದ್ಯ ವ್ಯಸನದಂತಹ ಚಟಗಳಿಗೆ ದಾಸರಾಗಿದ್ದು ನಿಜಕ್ಕೂ ಬೇಸರದ ಸಂಗತಿ. ಅದುವೇ ಮಹಿಳೆಯರಿಗೆ(women) ಮಾರಕವಾಗಬಹುದು ಎನ್ನಲಾಗುವ ಅಚ್ಚರಿಯ ಅಂಶ ಹೊರಬಿದ್ದಿದೆ. ಅದುವೇ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್‌(Breast cancer).ಮಹಿಳೆಯರು ವಯಸ್ಸಾದ್ರೂ ಯಂಗ್ ಅ್ಯಂಡ್ ಬ್ಯೂಟಿಪುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್ ಮೊರೆ ಹೋಗ್ತಿದ್ದಾರೆ. ಇದೇ ಈಗ ಮಹಿಳೆಯರ ಪ್ರಾಣ ತಗೆಯುವ ಸ್ತನ ಕ್ಯಾನ್ಸರ್ಗೆ ಕಾರಣವಾಗ್ತಿದೆ. ಸರ್ಕಾರ ಸ್ತನ ಕ್ಯಾನ್ಸರ್ ತಡೆಗಟ್ಟಲು ಸಾಕಷ್ಟು ಯೋಜನೆಗಳನ್ನು ತಂದಿದ್ದು, ಸ್ಕ್ತೀನಿಂಗ್ ಪ್ರೋಗ್ರಾಂ ಅನ್ನು ಉಚಿತವಾಗಿ ನೀಡಿದೆ. ಮಹಿಳೆಯೊಬ್ಬಳು ತನ್ನ ಇಡೀ ಜೀವಮಾನದಲ್ಲಿ ಒಮ್ಮೆಯಾದರೂ ಸ್ತನಗಳ ಆರೋಗ್ಯ ಪರಿಶೀಲಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದೆ. ಮದುವೆಯಾದ ಹೆಣ್ಣು ಮಕ್ಕಳು ಈ ಪರೀಕ್ಷೆ ಮಾಡಿಸಿಕೊಂಡರೆ ಕ್ಯಾನ್ಸರ್ಗೂ ಮೊದಲ ಸ್ಟೇಜ್ನಲ್ಲೇ ಪತ್ತೆಯಾಗಿ ಚಿಕಿತ್ಸೆಗೆ ಸುಲಭವಾಗಬಹುದು. ವಿಶ್ವದಲ್ಲಿ ಅಂಕಿ ಅಂಶ ತೆಗೆದುಕೊಂಡರೆ 2020ರ ಪ್ರಕಾರ 13.5% ಕ್ಯಾನ್ಸರ್ ಇದೆ. ಭಾರತದಲ್ಲಿ 1,80,000 ಪ್ರಕರಣಗಳು ಪ್ರತೀ ವರ್ಷ ಪತ್ತೆಯಾಗ್ತಿವೆ. 90 ಸಾವಿರ ಜನ ಸ್ತನ ಕ್ಯಾನ್ಸರ್ನಿಂದನೇ ಮೃತಪಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಬೈಕ್ ರೇಸ್‌ ವೇಳೆ ದುರ್ಘಟನೆ: ಯುವ ರೇಸರ್‌ ಶ್ರೇಯಸ್‌ ಹರೀಶ್‌ ಸಾವು