ಅಯೋಧ್ಯೆಯಲ್ಲಿ ರಾಮ ಸಂಭ್ರಮ.. ರಾಜ್ಯದಲ್ಲಿ "ರಾಮ" ರಾಜಕೀಯದ ಕಿಚ್ಚು..!

Jan 6, 2024, 2:29 PM IST

ಸರ್ವಕಾಲಕ್ಕೂ, ಸರ್ವರಿಗೂ ಆದರ್ಶ ಈ ಶ್ರೀರಾಮ. ಯಾರು ಎಷ್ಟೇ ಪ್ರಯತ್ನ ಪಟ್ರೂ, ಶ್ರೀರಾಮನಾಗಲು(Srirama) ಸಾಧ್ಯವೇ ಇಲ್ಲ. ಕಾರಣ, ದಶರಥನಂದನ ರಘುರಾಮ ಏಕಮೇವ ಅದ್ವಿತೀಯ. ಅಂಥಾ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಜನವರಿ 22ಕ್ಕೆ ಭವ್ಯ ಮಂದಿರ ಪ್ರವೇಶ ಮಾಡಲಿದ್ದಾನೆ. ಶ್ರೀರಾಮಚಂದ್ರನಿಗೆ ಅಯೋಧ್ಯೆಯಲ್ಲಿ(Ayodhya) ರಾಮ ಮಂದಿರ(Ram mandir) ಕಟ್ಬೇಕು ಅನ್ನೋದು ಶತಮಾನಗಳ ಕನಸಾಗಿತ್ತು. ಆ ಕನಸು ನನಸಾಗುವ ದಿನ ಹತ್ತಿರ ಬರ್ತಾ ಇದೆ. 500 ವರ್ಷಗಳ ವನವಾಸ ಮುಗಿಸಿದ ಶ್ರೀರಾಮನಿಗೆ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ಎದ್ದು ನಿಂತಿದೆ. ಇಡೀ ದೇಶವೇ ರಾಮ ಸಂಭ್ರಮದಲ್ಲಿರೋವಾಗ ಕರ್ನಾಟಕದಲ್ಲಿ(Karnataka) ರಾಮಾಗ್ನಿ ಜ್ವಾಲೆ ಧಗಧಗಿಸ್ತಾ ಇದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ರಾಮಾಸ್ತ್ರ ಹಿಡಿದು ಝಳಪಿಸ್ತಾ ಇದೆ. ಹಾದಿ ಬೀದಿಯಲ್ಲಿ ಕೇಸರಿ ಕಲಿಗಳು ಸರ್ಕಾರದ ವಿರುದ್ಧ ಅಬ್ಬರಿಸ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ, ರಾಮ ವಿರೋಧ ಸರ್ಕಾರ ಅಂತ ಝಾಡಿಸ್ತಾ ಇದ್ದಾರೆ. ಅಂದ ಹಾಗೆ ರಾಮ ಮಂದಿರ ಉದ್ಘಾಟನೆಯ ಹೊಸ್ತಿಲಲ್ಲಿ ಬಿಜೆಪಿಗೆ ಈ ರಾಮಾಸ್ತ್ರವನ್ನು ದಯಪಾಲಿಸಿರೋದು ಯಾರು ಗೊತ್ತಾ..? ಸ್ವತಃ ಕಾಂಗ್ರೆಸ್ ಸರ್ಕಾರ.

ಇದನ್ನೂ ವೀಕ್ಷಿಸಿ:  ಹಿಂದೂ ಸಂಪ್ರದಾಯದಂತೆ ಜರ್ಮನಿ ಯುವತಿ ಕೈ ಹಿಡಿದ ಕುಂದಾಪುರ ಯುವಕ !