May 11, 2021, 7:42 PM IST
ಬಾಗಲಕೋಟೆ, (ಮೇ.11): ಆಕ್ಸಿಜನ್ ಬೆಡ್ ಗಾಗಿ ಕೊರೋನಾ ಸೊಂಕಿತರ ಕುಟುಂಸ್ಥರು 12 ಗಂಟೆ ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಯಾದ್ಯಂತ ಕಾರು ಮೂಲಕ ಪ್ರದಕ್ಷಿಣೆ ಹಾಕಿದ್ದಾರೆ.
ಸಾಯೋರು ಸಾಯುವವರೇ, ಪಂಪ್ ಹೊಡೆದು ಧೈರ್ಯ ತುಂಬಬೇಕಾ?: ಸಚಿವ ಉಮೇಶ್ ಕತ್ತಿ
ಆದರೂ ಆಕ್ಸಿಜನ್ ಬೆಡ್ ಸಿಗದೇ ಕೊನೆಗೆ ಕೊರೋನಾ ಸೊಂಕಿತ ವಾಹನದಲ್ಲಿಯೇ ಮೃತಪಟ್ಟಿದ್ದಾನೆ. ಇದಕ್ಕೂ ಮೊದಲು ಸೋಂಕಿತನ ಕುಟುಂಬದವರು ಆಕ್ಸಿಜನ್ ಬೆಡ್‌ಗಾಗಿ ಬಿಜೆಪಿ ಶಾಸಕ ಸಿದ್ದು ಸವದಿ ಫೋನ್ ಮಾಡಿದ್ದಾರೆ. ದೂರವಾಣಿ ಮೂಲಕ ಶಾಸಕರೊಂದಿಗೆ ಮಾತನಾಡುವ ಸಂದರ್ಭ “ಏ ನಾಲಾಯಕ್ ಫೋನ್ ಇಡು, ದೊಡ್ಡ ಕಿಸಾಮತಿ ಮಾಡಿದೆ ಎಂದು ಬೈದಿದ್ದಾರೆ. ಸದ್ಯ ಈ ಆಡಿಯೋ ಫುಲ್ ವೈರಲ್ ಆಗಿದೆ.