Mar 10, 2021, 5:16 PM IST
ಬೆಂಗಳೂರು (ಮಾ. 10): ಕಲಬುರ್ಗಿಯ ಪಟ್ಟಣ ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿ, ಹೊಲದಲ್ಲಿ ಕರೆಂಟ್ ವೈರ್ಗಳು ಕೈಗೆ ಸಿಗುವಂತಿದ್ದವು. ರೈತರು ಹೊಲಕ್ಕೆ ಹೋದಾಗ ಅಪಾಯ ಕೈ ಬೀಸಿ ಕರೆಯುತ್ತಿತ್ತು. ಈ ಬಗ್ಗೆ ಸ್ಥಳೀಯರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಿಗ್ 3 ವರದಿ ಪ್ರಸಾರ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಾಗ, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಹೇಳಿದ್ಧಾರೆ. ಇದು ಬಿಗ್ 3 ವರದಿಯ ಫಲಶೃತಿ..!
ಹೊಲದಲ್ಲಿ ಕೈಗೆ ಸಿಕ್ತಿವೆ ಕರೆಂಟ್ ವೈರ್ಗಳು, ಜೆಸ್ಕಾಂ ಅಧಿಕಾರಿಗಳು ಡೋಂಟ್ ಕೇರ್..!