Oct 11, 2021, 1:44 PM IST
ಬೆಂಗಳೂರು (ಅ. 11): ಎಜಿಬಿ ಲೇಔಟ್ನ ಕ್ರಿಸ್ಟಲ್ ಅಪಾರ್ಟ್ಮೆಂಟ್ನ 21 ವರ್ಷದ ಬಿಸಿಎ ವಿದ್ಯಾರ್ಥಿ ಸೇರಿ ನಾಲ್ವರು ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಬಿಸಿಎ ಮೂರನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಅಮೃತ ವರ್ಷಿಣಿ(21) ಮತ್ತು ರಾಯನ್ ಸಿದ್ಧಾಥ್ರ್(12), ಚಿಂತನ್(12), ಭೂಮಿ(12) ನಾಪತ್ತೆಯಾಗಿದ್ದಾರೆ. ಅಮೃತ ವರ್ಷಿಣಿ ಮೊಬೈಲ್ ಸ್ವಿಚ್ ಆಗಿದೆ. ಫೇಸ್ಬುಕ್ ಅಕೌಂಟ್ ಕೂಡಾ ಡಿಲೀಟ್ ಮಾಡಿದ್ದಾಳೆ.
ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳ ಪತ್ತೆ ಮಾಡಿದ ಪೊಲೀಸರು
ಭಾನುವಾರ ಬೆಳಗ್ಗೆ ನಾಲ್ವರು ಪೋಷಕರಿಗೆ ಮಾಹಿತಿ ನೀಡದೆ ಮನೆಯಿಂದ ಹೋಗಿದ್ದಾರೆ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಮಧ್ಯೆ ಮನೆಗಳಲ್ಲಿ ಚೀಟಿಯೊಂದು ಪತ್ತೆಯಾಗಿದೆ. ಈ ಚೀಟಿಯಲ್ಲಿ ಚಪ್ಪಲಿ, ಬ್ರಷ್, ಟೂತ್ಪೇಸ್ಟ್, ನೀರಿನ ಬಾಟಲ್, ನಗದು ಮತ್ತು ಕ್ರೀಡೆ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ಕೊಂಡೊಯ್ಯಬೇಕೆಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಮೂವರು ಮಕ್ಕಳು ಯಾವಾಗಲೂ ಅಮೃವರ್ಷಿಣಿ ಜತೆಯೇ ಹೆಚ್ಚು ಸಮಯ ಕಳೆಯುತ್ತಿದ್ದರು. ಹೀಗಾಗಿ ಆಕೆಯೇ ಮಕ್ಕಳನ್ನು ಕರೆದೊಯ್ದಿರುವ ಸಾಧ್ಯತೆಗಳಿವೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.