May 16, 2022, 4:23 PM IST
ಮಡಿಕೇರಿ (ಮೇ.16): ಭಜರಂಗದಳ (Bajrang Dal) ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ (Trishula Deekshe), ಶಸ್ತ್ರಾಸ್ತ್ರ ತರಬೇತಿ (Weapon training) ನಡೆದಿದ್ದು, ಕೊಡಗಿನ ಸಾಯಿ ಶಂಕರ ಶಾಲೆಯಲ್ಲಿ ನಡೆದಿರುವ ಈ ಕಾರ್ಯಕ್ರಮ ಈಗ ರಾಷ್ಟ್ರಮಟ್ಟದಲ್ಲಿ ಚರ್ಚಿತ ವಿಷಯವಾಗಿದೆ. ಶಾಲಾವರಣದ ಒಳಗೆ ಹಿಜಾಬ್ ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ ಸಂಘ ಪರಿವಾರದಿಂದ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದೇಗೆ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ.
ಕೊಡಗು ಸಾಯಿ ಶಂಕರ ಶಾಲೆಯಲ್ಲಿ ಮಕ್ಕಳಿಗೆ ಶಸ್ತ್ರಾಸ್ತ್ರ ತರಬೇತಿ, ಭಜರಂಗದಳದಿಂದ ಆತಂಕದ ನಡೆ
'ಇದು ಸಂಘ ಪರಿವಾರದಿಂದ ನಡೆದ ಭಯೋತ್ಪಾದಕ ತರಬೇತಿ ಶಿಬಿರ. ಕೇರಳ, ದಕ್ಷಿಣ ಕನ್ನಡದ ಸಂಘ ಪರಿವಾರದವರು ಬಾಂಬ್ ತಯಾರಿಕೆಯಲ್ಲಿ ಎಕ್ಸ್‌ಪರ್ಟ್. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಒತ್ತಾಯಿಸಿದ್ದಾರೆ.