SSLC ವಿದ್ಯಾರ್ಥಿಗಳಿಗೆ ಸ್ಥೈರ್ಯ ತುಂಬಿದ ಸಚಿವ ಬಿ.ಸಿ.ಪಾಟೀಲ್

Jun 29, 2020, 5:06 PM IST

ಹಿರೇಕೆರೂರು(ಜೂ.29): ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮೂರನೇ ಪರೀಕ್ಷೆ ಬರೆಯುತ್ತಿದ್ದು, ಹಿರೇಕೆರೂರಿನ ಕೆ.ಎಸ್.ಪಾಟೀಲ್ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಪರೀಕ್ಷಾ ಕೊಠಡಿಗಳು, ಸಾಮಾಜಿಕ ಅಂತರ ಪರಿಶೀಲಿಸಿದ ಸಚಿವರು ಮಕ್ಕಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಯಾವುದೇ ಮಕ್ಕಳು ಕೋವಿಡ್‌ನಿಂದ ಭಯಪಡಬಾರದು. ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಬೇಕು ಎಂದು ಬಿ.ಸಿ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

SSLC ಪರೀಕ್ಷೆ: ರಾಜ್ಯ ಸರ್ಕಾರದ ಕ್ರಮ ಖಂಡಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಪರೀಕ್ಷೆ ಮುಗಿದ ಬಳಿಕ ಗುಂಪಾಗಿ ಓಡಾಡುವುದಾಗಲೀ ಒಂದೆಡೆ ಸೇರದೇ ನೇರವಾಗಿ ತಮ್ಮ ತಮ್ಮ ನಿವಾಸಗಳಿಗೆ ಅಥವಾ ತಂಗಿರುವ ಸ್ಥಳಗಳಿಗೆ ಸಾಮಾಜಿಕ ಅಂತರದಲ್ಲಿಯೇ ಸಾಗಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಮನೋಸ್ಥೈರ್ಯ ತುಂಬಿ ಮಕ್ಕಳ ಪರೀಕ್ಷೆಗೆ ಶುಭಕೋರಿದರು.