ಇನ್ನೊಂದೇ ದಿನ, ಖಗೋಳದಲ್ಲಿ ಕೌತುಕಮಯ ಸನ್ನಿವೇಶ!

May 25, 2021, 5:08 PM IST

ನವದೆಹಲಿ(ಮೇ.25) ಇನ್ನೊಂದೇ ದಿನದಲ್ಲಿ ಖಗೋಳದಲ್ಲಿ ಕೌತುಕಮಯ ಸನ್ನಿವೇಶವೊಂದು ಕಾಣಲಿದೆ. ಇದೊಂದು ವಿಸ್ಮಯ, ತೀರಾ ಅಪರೂಪ. ಬೇಕೆಂದಾಗ ಕಾಣಿಸುವುದಿಲ್ಲ. ಚಂದ್ರಗ್ರಹಣ ಹೀಗೂ ಇರುತ್ತದಾ ಎಂದು ಅನಿಸದೇ ಇರುವುದಿಲ್ಲ. ಇಂತಹುದ್ದೊಂದು ಚಂದದ ಹಾಗೂ ಅಷ್ಟೇ ರಹಸ್ಯಮಯವಾದ ಚಂದ್ರಗ್ರಹಣಕ್ಕೆ ಭೂಮಂಡಲ ಸಾಕ್ಷಿಯಾಗಲಿದೆ. 

26ಕ್ಕೆ ಚಂದ್ರಗ್ರಹಣ, ಸೂಪರ್‌ ಮೂನ್‌, ರೆಡ್‌ ಬ್ಲಡ್‌ ಮೂನ್‌!

ಇದೇ ಮೇ 26ರಂದು ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. ಅಂದು ಈ ವರ್ಷದ ಮೊದಲ ಚಂದ್ರಗ್ರಹಣ ಇದ್ದು, ಅದೇ ದಿನ ಸೂಪರ್‌ ಮೂನ್‌ ಹಾಗೂ ರೆಡ್‌ ಬ್ಲಡ್‌ ಮೂನ್‌ ವಿದ್ಯಮಾನವೂ ಗೋಚರವಾಗಲಿದೆ. ಇದನ್ನು ವೀಕ್ಷಿಸಲು ಖಗೋಳಾಸಕ್ತರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.