ಏರೋ ಇಂಡಿಯಾ 2021: ಸಾರಂಗ್, ಸೂರ್ಯಕಿರಣ್ ಜಂಟಿ ಕಸರತ್ತು, ಏನಿವುಗಳ ತಾಕತ್ತು..?

Feb 6, 2021, 6:04 PM IST

ಬೆಂಗಳೂರು (ಫೆ. 06): ವಿಶ್ವದಲ್ಲೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ತಂಡ ‘ಸಾರಂಗ್‌’ ಹಾಗೂ ಏರ್‌ಕ್ರಾಫ್ಟ್‌ಗಳ ಏರೋಬ್ಯಾಟಿಕ್‌ ತಂಡವಾದ ‘ಸೂರ್ಯಕಿರಣ್‌’ ಏರೋ ಇಂಡಿಯಾ-2021 ವೇದಿಕೆಯಲ್ಲಿ ಜಂಟಿಯಾಗಿ ಪ್ರದರ್ಶನ ನೀಡಿವೆ.

ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್, 400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..! 

ಪ್ರತಿ ಗಂಟೆಗೆ ಸುಮಾರು 200 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾರಂಗ್‌ ಹೆಲಿಕಾಪ್ಟರ್‌, 500ರಿಂದ 600 ಕಿ.ಮೀ. ವೇಗದಲ್ಲಿ ಸಂಚರಿಸುವ ಸೂರ್ಯಕಿರಣ್‌ ಏರ್‌ಕ್ರಾಫ್ಟ್‌ಗಳು ಜಂಟಿಯಾಗಿ ಪ್ರದರ್ಶನ ನೀಡುವುದು ತುಂಬಾ ಸವಾಲಾಗಿತ್ತು. ಭಾರತೀಯ ವಾಯುಸೇನೆಯ ಸೂಚನೆಯಂತೆ ಈ ಪ್ರಯತ್ನ ಯಶಸ್ವಿಯಾಗಿದೆ.  ಸಾರಂಗ್ ಹಾಗೂ ಸೂರ್ಯ ಕಿರಣ್ ಸ್ವದೇಶಿ ತಂತ್ರಜ್ಞಾನದ ಮೂಲಕ ಸಿದ್ಧಗೊಂಡಿದ್ದು ಆತ್ಮನಿರ್ಭರದ ಸಂಕೇತವಾಗಿದೆ.  ಈ ಬಗ್ಗೆ ಸಾರಂಗ್‌ ಹೆಲಿಕಾಪ್ಟರ್‌ ತಂಡದ ವಿಂಗ್‌ಕಮಾಂಡರ್‌, ಕನ್ನಡಿಗ ಗಿರೀಶ್‌ ಕೊಮರ್‌ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ಧಾರೆ. ಸಾರಂಗ್ ಕಾರ್ಯಕ್ಷಮತೆ ಬಗ್ಗೆ ವಿವರಿಸಿದ್ಧಾರೆ.