News Hour: ಹೀಯಾಳಿಸಿದವರೇ ಎದುರೇ ಹೆಮ್ಮರವಾಗಿ ಬೆಳೆದು ನಿಂತ ಭಾರತದ ಇಸ್ರೋ!

Aug 25, 2023, 11:44 PM IST

ಬೆಂಗಳೂರು (ಆ.25): ಕೆಲವೊಂದು ದೇಶಗಳು ತನ್ನ ಬಾವುಟದಲ್ಲಿ ಚಂದ್ರನನ್ನು ಹೊಂದಿದೆ. ಆದರೆ, ಕೆಲವೇ ಕೆಲವು ದೇಶಗಳು ಚಂದ್ರನಲ್ಲಿ ತನ್ನ ಬಾವುಟವನ್ನು ಹೊಂದಿದೆ. ಈ ಸಾಲಿಗೆ ಈಗ ಭಾರತವೂ ಸೇರ್ಪಡೆಯಾಗಿದೆ. ಇಸ್ರೋದ ಈ ಮಹಾಸಾಧನೆಯ ಹಿಂದೆ ದಶಕಗಳ ಕಾಲ ಎದುರಿಸಿದ, ಸೋಲು, ಅವಮಾನ ಹಾಗೂ ಹತಾಶೆಗಳಿವೆ.

2019ರ ಚಂದ್ರಯಾನ-2 ಯೋಜನೆ ವಿಫಲವಾಗಿದ್ದಾಗ ಬಿಬಿಸಿಯ ಆ್ಯಂಕರ್ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.‘ಭಾರತದಲ್ಲಿ ಮೂಲಸೌಕರ್ಯಗಳಿಲ್ಲ. ಸಾಕಷ್ಟು ಬಡತನ ಹೊಂದಿರುವ ದೇಶ. 700 ಮಿಲಿಯನ್‌ಗಿಂತ ಹೆಚ್ಚು, ಭಾರತೀಯರಿಗೆ ಶೌಚಾಲಯವಿಲ್ಲ. ನಿಜವಾಗಿ ಇಷ್ಟೊಂದು ಹಣ ಬಾಹ್ಯಾಕಾಶಕ್ಕೆ ಖರ್ಚು ಮಾಡಬೇಕಾ?' ಎಂದು ಆತ ಪ್ರಶ್ನೆ ಮಾಡಿದ್ದ ವಿಡಿಯೋ ವೈರಲ್‌ ಆಗಿದೆ.

ತಿಂಗಳಿಗೆ 2.5 ಲಕ್ಷ ವೇತನ ಪಡೆಯುವ ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಇರೋದು ಇನ್ನು ಒಂದೂವರೆ ವರ್ಷದ ಅಧಿಕಾರ!

ಇದರ ಬೆನ್ನಲ್ಲಿಯೇ ಸ್ಪಷ್ಟನೆ ನೀಡಿರುವ ಬಿಬಿಸಿ ಇದು ಚಂದ್ರಯಾನ-3ಯ ವೇಳೆ ಮಾಡಿದ ಕಾರ್ಯಕ್ರಮವಲ್ಲ. ಹಿಂದಿನ ವಿಡಿಯೋ ಅದನ್ನು ಈಗ ವೈರಲ್‌ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ. ಇನ್ನು ಈ ವಿಡಿಯೋಗೆ ಆನಂದ್‌ ಮಹೀಂದ್ರಾ ಕೂಡ ಬಹಳ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.