ಯುವ ಬಿಡುಗಡೆಗೆ ಡೇಟ್ ಫಿಕ್ಸ್: ಸಿನಿಮಾ ರಿಲೀಸ್ ಆಗೋದು ಯಾವಾಗ..?

Oct 28, 2023, 11:45 AM IST

ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ಸಿನಿಮಾ(Yuva Movie) ಡಿಸೆಂಬರ್ 22ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಡಾರ್ಲಿಂಗ್ ಪ್ರಭಾಸ್ ಯುವ ರಿಲೀಸ್ ಡೇಟ್ ತ್ಯಾಗ ಮಾಡಿದ್ದಾರೆ ದೊಡ್ಮನೆ ಕುಡಿ ಯುವ. ಯಾಕಂದ್ರೆ ಡಿಸೆಂಬರ್ 22ಕ್ಕೆ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ರಿಲೀಸ್ ಆಗ್ತಿದೆ. ಯುವ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ(Sandalwood) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್(Hombale Films) ಬಂಡವಾಳ ಹೂಡುತ್ತಿದೆ. ಇದೇ ನಿರ್ಮಾಣ ಸಂಸ್ಥೆಯ ಮತ್ತೊಂದು ಕೊಡುಗೆ ಪ್ರಭಾಸ್ ನಟನೆಯ ಸಲಾರ್. ಹೀಗಾಗಿ ಸಲಾರ್ ಯುವ ಮಧ್ಯೆ ಕ್ಲ್ಯಾಶ್ ಆಗ್ಬಾರ್ದು ಅಂತ ಯುವ ಸಿನಿಮಾದ ಬಿಡುಗಡೆಯನ್ನ ಮುಂದಿನ ವರ್ಷ 2024ರ ಮಾರ್ಚ್ 28ಕ್ಕೆ ಬಿಡುಗಡೆ ಪೀಕ್ಸ್ ಮಾಡಿದ್ದಾರೆ. ಅಲ್ಲಿಗೆ ಯುವ ಸಿನಿಮಾ ನೋಡೋದಕ್ಕೆ ಇನ್ನೂ ಐದು ತಿಂಗಳು ಕಾಯಲೇ ಬೇಕು. 

ಇದನ್ನೂ ವೀಕ್ಷಿಸಿ:  ಫಿಕ್ಸ್ ಆಯ್ತು ಬ್ಯಾಡ್‌ಮ್ಯಾನರ್ಸ್‌ ರಿಲೀಸ್ ಡೇಟ್! ಬಾಕ್ಸಾಫೀಸ್ ಬೇಟೆಗೆ ಬರ್ತಿದ್ದಾನೆ ಯಂಗ್ ರೆಬೆಲ್!