Sep 7, 2023, 2:22 PM IST
ಹಾಸ್ಯ ಕಲಾವಿದ ನರಸಿಂಹರಾಜು ಅವರು ಹುಟ್ಟಿ ನೂರು ವರ್ಷ ಆಗಿದೆ. ಅವರು ನಗುವಿಗೆ ಬ್ರ್ಯಾಂಡ್ ಆಂಬ್ಯಾಸಿಡರ್ ಆಗಿದ್ದರು. ಅವರ ಮೊದಲ ಸಿನಿಮಾ ಬೇಡರ ಕಣ್ಣಪ್ಪವಾಗಿದೆ. ನರಸಿಂಹರಾಜು(Narasimharaj) ಅವರು ಹೆಚ್ಚಾಗಿ ಪೌರಾಣಿಕ ಪಾತ್ರವನ್ನು ಮಾಡುತ್ತಿದ್ದರು. ಕೆಲವು ಬಾರಿ ಹೆಣ್ಣಿನ ವೇಷವನ್ನು ಹಾಕಿದ್ದಾರಂತೆ. 25 ವರ್ಷಗಳ ಸಿನಿಮಾ ವೃತ್ತಿಯಲ್ಲಿ ಸುಮಾರು 256 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಊರೂರು ಸುತ್ತಿ ನಾಟಕವಾಡುತ್ತಾ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಅವರ ಕೊನೆಯ ಸಿನಿಮಾ(Movie) ಪ್ರೀತಿ ಮಾಡು ತಮಾಷೆ ನೋಡು ಡಬ್ಬಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೀದಿತ್ತು. ಹಾಸ್ಯ ಕಲಾವಿದ ನರಸಿಂಹ ರಾಜು ಅವರ ಬಗ್ಗೆ ಮಗಳು ಸುಧಾ ನರಸಿಂಹ ರಾಜು ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..
ಇದನ್ನೂ ವೀಕ್ಷಿಸಿ: Abortion ಆಗಿದ್ದಕ್ಕೆ ಡಿಪ್ರೆಶನ್‌ಗೆ ಜಾರಿದೆ, ಓಶೋ ಆಶ್ರಮ ಸೇರಿಕೊಂಡಿಲ್ಲ: ನಟಿ ಪ್ರೇಮಾ ಸ್ಪಷ್ಟನೆ