ತಮಿಳುನಾಡಲ್ಲಿ ಕನ್ನಡ ಡಿಂಡಿಮ ಬಾರಿಸಿದ ಸುದೀಪ್: ತಮಿಳು ನಿರ್ಮಾಪಕರಾದ್ರೂ, ಕನ್ನಡಿಗರದ್ದೇ ಹವಾ!

Aug 5, 2023, 2:41 PM IST

ತಮಿಳು ಚಿತ್ರರಂಗದಲ್ಲಿ ಇನ್ಮುಂದೆ ತಮಿಳು ಕಲಾವಿದರೇ ಇರಬೇಕು. ತಮಿಳಿನವರೇ ತಮಿಳು ಸಿನಿಮಾದಲ್ಲಿ ಕೆಲಸ ಮಾಡಬೇಕು. ಅದು ಕಲಾವಿದರಾಗಿರಲಿ ಕಾರ್ಮಿಕರಾಗಿರಲಿ, ತಂತ್ರಜ್ಞರಾಗಿರಲಿ ಎಂದು ಹೊಸ ನಿಯಮವನ್ನು ಅಲ್ಲಿ ಫಿಲ್ಮ್ ಫೇಡರೇಷನ್ ಜಾರಿಗೆ ತರುವ ಬಗ್ಗೆ ಚರ್ಚಿಸುತ್ತಿದೆ. ಇದೇ ವೇಳೆ ಕಿಚ್ಚ ಸುದೀಪ್(kichha sudeep) ತಮ್ಮ 46ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ಶೂಟಿಂಗ್ ತಮಿಳುನಾಡಿನಲ್ಲಿ(Tamilnadu) ನಡೆಯುತ್ತಿದೆ. ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಶನ್ಸ್’ ಮೂಲಕ ಕಲೈಪುಲಿ ಎಸ್. ಧಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆಯುತ್ತಿದೆ. ಅದಕ್ಕಾಗಿ ಮಹಾಬಲಿಪುರಂನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ವಿಶೇಷ ಏನೆಂದರೆ ‘K 46′ ಸಿನಿಮಾದ ಸೆಟ್ನಲ್ಲಿ ಕೆಲಸ ಮಾಡುತ್ತಿರುವ ಶೇಕಡ 80ರಷ್ಟು ಮಂದಿ ಕನ್ನಡದವರು. ಕಾಲಿವುಡ್ನ(kollywood) ನಿರ್ಮಾಣ ಸಂಸ್ಥೆ. ಹಾಗಾಗಿ ತಮಿಳಿನಲ್ಲಿ ಈ ಸಿನಿಮಾ ನಿರ್ಮಿಸಬೇಕು ಎಂಬುದು ನಿರ್ಮಾಪಕರ ಉದ್ದೇಶ ಆಗಿತ್ತು. ಆದರೆ ಸುದೀಪ್ ಅಂದುಕೊಂಡಿದ್ದೇ ಬೇರೆ. ಕನ್ನಡದಲ್ಲಿಯೇ ಸಿನಿಮಾ ಶೂಟಿಂಗ್ ಮಾಡಿ ನಂತರ ತಮಿಳಿಗೆ ಡಬ್ ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ಈ ಸಿನಿಮಾದ ಶೂಟಿಂಗ್ ತಮಿಳುನಾಡಿನಲ್ಲಿ ನಡೆದರೂ ಕೂಡ ಚಿತ್ರೀಕರಣದ ಸೆಟ್ನಲ್ಲಿ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರೇ ತುಂಬಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!