Aug 20, 2023, 9:52 AM IST
2009ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ ವೀರ ಮದಕರಿ ಸಿನಿಮಾದಲ್ಲಿ ಸುದೀಪ್(Sudeep), ರಾಗಿಣಿ ಸೇರಿದಂತೆ ಇವರೊಟ್ಟಿಗೆ ಪುಟ್ಟ ಮಗು ಕೂಡ ಸಖತ್ತಾಗಿ ಅಭಿನಯಿಸಿತ್ತು. ಆದ್ರೆ ಅಂದು ವೀರ ಮದಕರಿಯ(veera madakari) ಮುದ್ದಿನ ಮಗಳಾಗಿ ನಟಿಸಿದ್ದ ಪುಟ್ಟು ಮಗು(child) ಇಂದು ಸ್ಟಾರ್ ಹಿರೋಯಿನ್(star heroine) ಆಗಿದ್ದಾಳೆ. ಜೆರುಶಾ ಕ್ರಿಸ್ಟೋಫರ್(Jerusha Christopher) ಅಂದು ವೀರ ಮದಕರಿಯ ಮುದ್ದಿನ ಪುಟಾಣಿ. ಆದ್ರೆ ಇಂದು ತಮಿಳು ಸಿನಿ ರಂಗಲ್ಲಿ ಮಿಂಚೋಕೆ ರೆಡಿಯಾರೋ ಗೊಂಬೆ. ಬೆಂಗಳೂರಿನವೇ ಆದ ಜೆರುಶಾ ಕ್ರಿಸ್ಟೀಫರ್ ಈಗ ಹಾಟ್ ಹಿರೋಯಿನ್. ಈಗಾಗಲೇ ಹಲವು ಜಾಹೀರಾತುಗಳಲ್ಲಿ ನಟಿಸಿರೋ ಜೆರುಶಾ ಕ್ರಿಸ್ಟೋಫರ್, ಫಹಾದ್ ಫಾಸಿಲ್ರ ಧೂಮಂ ಸಿನಿಮಾದಲ್ಲೂ ನಟಿಸಿದ್ರು. ಆಗ ಈ ಹುಡುಗಿ ಯಾರು ಅಂತ ಹುಡುಗಿದವರು ಹಲವರು. ಆದ್ರೆ ಈಗ ಸಂದರ್ಶನ ಒಂದರಲ್ಲಿ ನಾನು ವೀರ ಮದಿಕರಿ ಸಿನಿಮಾದಲ್ಲಿ ಕಿಚ್ಚನ ಮಗಳಾಗಿ ನಟಿಸಿದ್ದೆ ಅನ್ನೋ ವಿಚಾರವನ್ನ ರಿವಿಲ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: 18ನೇ ವರ್ಷದ ಬರ್ತಡೇಯಲ್ಲಿ 'ಜೋಗಿ': ಈ ಸಿನಿಮಾ ಹುಟ್ಟಿಗೆ ಕಾರಣ ಯಾರು ಗೊತ್ತಾ ?