Apr 21, 2023, 4:24 PM IST
ಒಂದು ಕಡೆ ಕೆಜಿಎಫ್ ಚಾಪ್ಟರ್ 3 ಬರುತ್ತೆ ಅನ್ನೋ ಚರ್ಚೆ ನಡೆಯುತ್ತಿರುವಾಗಲೇ, ರಮಿಕಾ ಸೇನ್ ಪಾತ್ರ ಮಾಡಿರೋ ರವೀನಾ ಟಂಡನಾಗೆ ರಾಕಿ ಭಾಯ್ ಸರ್ಪ್ರೈಸ್ ಆಗಿ ಫೋನ್ ಕರೆ ಮಾಡಿ ಕೆಜಿಎಫ್3ಗೆ ರೆಡಿ ಆಗಿ ಅಂದಿದ್ದಾರಂತೆ. ಇದನ್ನ ಸ್ವತಹ ರವೀನಾ ಟಂಡನಾ ಅವರೇ ಹೇಳಿದ್ದಾರೆ. ಕೆಜಿಎಫ್ 3' ಸದ್ಯಕ್ಕಿಲ್ಲ ಅಂತ ಕೆಲ ತಿಂಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿತ್ತು. ಆದ್ರೆ ಈಗ 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಚರ್ಚೆ ಆಗುತ್ತಲೇ ಇದೆ. ಇದರ ಮಧ್ಯೆ ಯಶ್ ಅಭಿಮಾನಿಗಳು ಕೆಜಿಎಫ್ ಚಾಪ್ಟರ್3 ಫ್ಯಾನ್ಮೇಡ್ ಪೋಸ್ಟರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಅತ್ತ ಕಡೆ ಯಶ್ ಮಲೆಯಾಳಂ ಡೈರೆಕ್ಟರ್ ಜೊತೆ ಸಿನಿಮಾ ಮಾಡ್ತಾರೆ ಅಂತಲೂ ಸುದ್ದಿ ಇದೆ. ಒಟ್ಟಿನಲ್ಲಿ ಯಶ್ 19ನೇ ಸಿನಿಮಾ ಬಗ್ಗೆ ಇನ್ನೂ ಅದೆಷ್ಟು ಸುದ್ದಿಗಳು ಬರ್ತಾವೋ ಗೊತ್ತಿಲ್ಲ.
ಇದನ್ನೂ ವೀಕ್ಷಿಸಿ: ಪುಷ್ಪರಾಜ್‌ನನ್ನು ಬೆಳೆಯಲು ಬಿಡಲ್ಲ ಎಂದ ಪೊಲೀಸರು !