Oct 26, 2022, 11:33 AM IST
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಸಿನಿಮಾಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಕಾಂತಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ತಿಳಿಸಿದ್ದಾರೆ. 25 ದಿನಗಳಲ್ಲಿ 77 ಲಕ್ಷ ಜನರು ಕನ್ನಡದಲ್ಲಿ ಸಿನಿಮಾವನ್ನು ನೋಡಿದ್ದು, ಇದು ಅತಿ ಹೆಚ್ಚು ಜನರು ನೋಡಿರುವ ಕನ್ನಡ ಸಿನಿಮಾ ಎನ್ನುವ ಖ್ಯಾತಿಗೂ ಒಳಗಾಗಿದೆ. ಅಷ್ಟೇ ಅಲ್ಲದೆ ಪುನೀತ್ ನಟನೆಯ ರಾಜಕುಮಾರ ಹಾಗೂ ಕೆಜಿಎಫ್ ಸಿನಿಮಾಗಳ ದಾಖಲೆಯನ್ನೇ ಹಿಂದಿಕ್ಕಿದ್ದು, 25 ದಿನಗಳಲ್ಲಿ ಬರೋಬ್ಬರಿ 200 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ.
ವೀರಗಾಸೆಗೆ ಅವಮಾನ ಮಾಡಿದವರಿಗೆ ಜಯರಾಜ್ ಹೊಡೆದಿದ್ದಾರೆ: ಧನಂಜಯ್ ಸ್ಪಷ್ಟನೆ