Dec 31, 2019, 11:32 AM IST
ನ್ಯೂ ಇಯರ್ ಬಂತು ಅಂದ್ರೆ ಸಾಕು. ಯಾರ್ ಎಲ್ಲಿ ನ್ಯೂ ಇಯರ್ ಮಾಡ್ತಾರೆ ಅನ್ನೋ ಪ್ರಶ್ನೆ ಬಂದೇ ಬಿಡುತ್ತದೆ. ಸ್ಟಾರ್ ನಟರ ಬಗ್ಗೆ ಅಂತೂ ಈ ವಿಚಾರವಾಗಿ ಭಾರಿ ಕುತೂಹಲ ಇರುತ್ತದೆ. ಈ ಕುತೂಹಲ ಈ ವರ್ಷ ವಿಶೇಷವಾಗಿಯೇ ಇದೆ. ಯಾವ್ ಸ್ಟಾರ್ ಎಲ್ಲಿದ್ದಾರೆ? ಇವರ ನ್ಯೂ ಇಯರ್ ಸೆಲೆಬ್ರೇಷನ್ ಏನು ? ಈ ಎಲ್ಲ ಕುತೂಹಲಕ್ಕೆ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿವೆ.
ಪುನೀತ್ ರಾಜಕುಮಾರ್ ಸದ್ಯ ಇಂಡಿಯಾದಲ್ಲಿಯೇ ಇಲ್ಲ. ಕ್ರಿಸ್ಮಸ್ ಹಬ್ಬಕ್ಕೆ ದೂರದ ಸಿಂಗಪೂರ್ ಗೆ ಹೋಗಿದ್ದಾರೆ. ಫ್ಯಾಮಿಲಿ ಜೊತೆಗೇನೆ ಹೋಗಿರೋದು ವಿಶೇಷ. ಕೆಜಿಎಫ್ ಶೂಟಿಂಗ್ ನಡಿಯುತ್ತಿರುವುದರಿಂದ ಯಶ್ ಮತ್ತು ರಾಧಿಕ ಮಕ್ಕಳು ಅಪ್ಪಮ್ಮನ ಜೊತೆ ಮನೆಯಲ್ಲಿಯೇ ಹೊಸ ವರ್ಷ ಆಚರಿಸಲಿದ್ದಾರೆ. ಯಾವ್ಯಾವ ನಟರು ಎಲ್ಲಿರಲಿದ್ದಾರೆ? ಇಲ್ಲಿದೆ ನೋಡಿ.