Oct 25, 2021, 2:30 PM IST
ಕೊರೋನಾ ಸಂಕಷ್ಟ ತಿಳಿಯಾಗುತ್ತಿರುವ ಹೊತ್ತಿನಲ್ಲಿ ಮೊದಲ ಭಾರಿಗೆ ಯಶಸ್ಸಿನ ಸಂಭ್ರಮ ಮಾಡಿಕೊಂಡ ಸ್ಟಾರ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು 'ಕೋಟಿಗೊಬ್ಬ 3' (Kotigobba 3). ಈ ಚಿತ್ರ ಅಂದುಕೊಂಡಗಿಂತ ಒಂದು ದಿನ ತಡವಾಗಿ ಬಂದರೂ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ. ಈ ಕಲರ್‌ಫುಲ್ ಕಾರ್ಯಕ್ರಮದಲ್ಲಿ ಹಾಡು, ಡ್ಯಾನ್ಸ್, ತಮಾಷೆಯ ಮಾತುಗಳು, ಭಾವುಕತೆಯ ನೆನಪುಗಳು ಬಂದು ಹೋದವು. ಮುಖ್ಯ ಅತಿಥಿಯಾಗಿ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಆಗಮಿಸಿದ್ದರು.
ಕೋಟಿಗೊಬ್ಬ ಬಗ್ಗೆ ಸುದೀಪ್ ಪೋಸ್ಟ್: ಮನದಾಳದ ಮಾತು ಬಿಚ್ಚಿಟ್ಟ ಕಿಚ್ಚ
ಚಿತ್ರರಂಗಕ್ಕೆ ಇಂಥದ್ದೊಂದು ಗೆಲುವುಬೇಕಿತ್ತು. ಈ ಚಿತ್ರದ ಯಶಸ್ಸಿನಿಂದ ಬೇರೆ ಚಿತ್ರಗಳಿಗೂ ಧೈರ್ಯ ಬಂದಿದೆ. ದೊಡ್ಡ ಯಶಸ್ಸು ಕೊಟ್ಟ 'ಕೋಟಿಗೊಬ್ಬ 3' ಚಿತ್ರತಂಡದ ಪ್ರತಿಯೊಬ್ಬರಿಗೂ ಚಿತ್ರರಂಗದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉಪೇಂದ್ರ ಹೇಳಿದರು. ಇನ್ನು ಚಿತ್ರದ ನಾಯಕ ಕಿಚ್ಚ ಸುದೀಪ್ (Kiccha Sudeep), ಏನೇ ಸಮಸ್ಯೆಗಳೂ ಎದುರಾದರೂ ಎಲ್ಲವನ್ನು ಮರೆತು ಚಿತ್ರವನ್ನು ಈ ಮಟ್ಟಕ್ಕೆ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, ಮಾಡೋನಾ ಸೆಬಾಸ್ಟಿಯನ್, ಅಭಿರಾಮಿ, ಶಿವಕಾರ್ತಿಕ್, ಅರ್ಜುನ್ ಜನ್ಯಾ, ಶೇಖರ್ ಚಂದ್ರು ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment