ಅಬ್ಬಾಬ್ಬ..! ಜ್ಯೂನಿಯರ್ NTR ಸಿನಿಮಾಗೆ ಇಷ್ಟು ಬೆಲೆಯಾ ಕ್ಯಾಮೆರಾ ಬಳಕೆ ?

Jun 29, 2023, 1:02 PM IST

ದೇವರ’ ಸಿನಿಮಾದಲ್ಲಿ ಬಳಸ್ತಿರೋ ಕ್ಯಾಮೆರಾಗೆ ಮೀಸಲಿಟ್ಟಿರೋ ಬಜೆಟ್‌ ಎಷ್ಟು ಗೊತ್ತಾ? ಬರೋಬ್ಬರಿ 80ಕೋಟಿ ರೂಪಾಯಿ. ಹೌದು, ಕೇವಲ ಕ್ಯಾಮೆರಾಗಾಗಿಯೇ ದೇವರ ಸಿನಿಮಾದ ಪ್ರೊಡ್ಯೂಸರ್‌ 80 ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರಂತೆ. ನಿರ್ದೇಶಕ ಕೊರಟಾಲ ಶಿವ ಈ ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ . ಈ ಚಿತ್ರದ ಚಿತ್ರೀಕರಣ ಇದೇ ವರ್ಷ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ದೇವರ ಚಿತ್ರದ ತಾರಾಗಣವೂ ತುಂಬಾ ದೊಡ್ಡದಾಗಿದೆ. ಈಗಾಗಲೇ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ಹೀರೋ ಸೈಫ್ ಅಲಿಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಸಿನಿಮಾದ ಸ್ಕೇಲ್ ಕೇವಲ ನಟ-ನಟಿಯರಿಂದ ದೊಡ್ಡದಾಗೋದಿಲ್ಲ. ಟೆಕ್ನಿಕಲಿ ಕೂಡ ಸಿನಿಮಾ ಸಖತ್ ಸೌಂಡ್ ಮಾಡ್ಬೇಕು. ನಿಮ್ಗೆ ಮೊದ್ಲೇ ಹೇಳಿದ ಹಾಗೆ, ಕ್ಯಾಮರಾಗಾಗಿ 80 ಕೋಟಿ ಮೀಸಲಿಡಲಾಗಿದೆ.

ಇದನ್ನೂ ವೀಕ್ಷಿಸಿ: ಕಾಂತಾರ ಹೀರೋಗೆ ಅಮೇರಿಕಾದಲ್ಲಿ ಸಿಕ್ತು ದೊಡ್ಡ ಗರಿ: ರಿಷಬ್ ಸರಳತೆಗೆ ಮನಸೋತ ಕನ್ನಡಿಗರು!