Jul 27, 2023, 3:27 PM IST
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಎಷ್ಟು ಬೇಗ ಕೋಪ ಮಾಡಿಕೊಳ್ಳುತ್ತಾರೋ, ಹಾಗೆ ತಮಾಷೆನೂ ಮಾಡ್ತಾರೆ. ಅಭಿಮಾನಿಗಳ ಬಳಿ ಆಂಗ್ರಿ ಮ್ಯಾನ್ ಶಿವಣ್ಣನನ್ನು ನೋಡಿರ್ತೀರಿ. ಹಾಗೆ ಅದೆ ಅಭಿಮಾನಿಗಳ(Fan) ಜೊತೆ ಸಣ್ಣ ಮಗುವಿನ ರೀತಿ ವರ್ತಿಸೊ ಶಿವಣ್ಣನನ್ನು ನೋಡಿರ್ತೀರಿ. ಹಾಸ್ಯ ಪ್ರಜ್ನೆಯೂ ಅದರ ಜೊತೆ ಮಗುವಿನಂಥಾ ಮನಸ್ಸು ಎರಡೂ ಇದೆ ಶಿವಣ್ಣನಲ್ಲಿ. ಅದಕ್ಕೆ ಸಾಕ್ಷಿಯಾಗಿದೆ ಈಗ ವೈರಲ್ ಆಗಿರೋ ವೀಡಿಯೋ(Viral video) . ಹುಡುಗಿಯೊಬ್ಬಳು ಶಿವರಾಜ್ ಕುಮಾರ್‌ರನ್ನು(shivaraj kumar) ನೋಡಬೇಕು. ಫೋಟೊ ಕ್ಲಿಕ್ಕಿಸಿಕೊಳ್ಳಬೇಕು ಎಂದು ಜೋರಾಗಿ ಕೂಗುತ್ತಾಳೆ. ಅಲ್ಲೆ ಸಿನಿಮಾ ನೋಡಲು ಜನರ ನಡುವೆ ನಡೆದು ಬರುತ್ತಿದ್ದ ಶಿವಣ್ಣನ ಕಿವಿಗೂ ಅದು ಬೀಳುತ್ತೆ. ತಕ್ಷಣ ನಿಂತುಕೊಂಡ ಶಿವಣ್ಣ ಬಾ ನೋಡು ನೋಡು ಎಂದು ಪಟ್ ಅಂತ ಹುಡುಗಿ ಮುಖದ ಮುಂದೆ ಮುಖ ಇಟ್ಟು ನಿಂತು ಬಿಡುತ್ತಾರೆ. ಹುಡುಗಿಗೆ ಸಖತ್ ಚಮಕ್ ಸಿಗುತ್ತೆ. ಜೊತೆಗೆ ನಾಚಿಕೆಯೂ ಆಗುತ್ತೆ. ಮುಖ ಮುಚ್ಚಿಕೊಂಡು ನಾಚುತ್ತಾ ನಗುತ್ತಾ ಫೋಟೋ ಕ್ಲಿಕ್ಕಿಸಿಕೊಂಡ ಹುಡುಗಿ ನಗುನಗುತ್ತಲೇ ಅಲ್ಲಿಂದ ಓಡುತ್ತಾಳೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: ರಿಷಬ್ ಶೆಟ್ಟಿಯ 'ಕಾಂತಾರ-2'ಗೆ ಯಾರಾಗ್ತಾರೆ ಸಿಂಗಾರ ಸಿರಿ: ಫೈನಲ್ ಆದ್ರಾ ಹೀರೋಯಿನ್.?