James 2022: ಪುನೀತ್ ರಾಜ್‌ಕುಮಾರ್ ತವರು ಜಿಲ್ಲೆ ಚಾಮರಾಜನಗರದಲ್ಲಿ 'ಜೇಮ್ಸ್' ಹವಾ ಶುರು

Mar 13, 2022, 6:59 PM IST

ಮಾರ್ಚ್ 17ರಂದು ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹುಟ್ಟುಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಸ್ಯಾಂಡಲ್‌ವುಡ್‌ (Sandalwood) ಸಿದ್ಧತೆ ಮಾಡಿಕೊಂಡಿದೆ. ಅಪ್ಪು ಇಲ್ಲವಾದರು, ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವದಿಂದ ಅಭಿಮಾನಿಗಳು (Fans) ಜಾತ್ರೆ ಮಾಡಲು ಶುರು ಮಾಡಿದ್ದಾರೆ. ವಿಶೇಷವಾಗಿ ಅಂದೇ ಅವರ ನಟನೆಯ 'ಜೇಮ್ಸ್' (James) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಅಪ್ಪು ತವರು ಜಿಲ್ಲೆ ಚಾಮರಾಜನಗರದಲ್ಲಿ ಅಭಿಮಾನಿಗಳು 'ಜೇಮ್ಸ್' ಚಿತ್ರವನ್ನು ಸ್ವಾಗತಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. 

James 2022: ಅಪ್ಪು ಕೊನೆ ಚಿತ್ರದ ಪ್ರೀ-ರಿಲೀಸ್​ ಇವೆಂಟ್‌ಗೆ ಕೌಂಟ್‌ಡೌನ್: ಹೇಗಿದೆ ಗೊತ್ತಾ ಸಿದ್ಧತೆ?

ಚಾಮರಾಜನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಕಟೌಟ್ ಮತ್ತು ಫ್ಲೆಕ್ಸ್‌ಗಳ ಅಬ್ಬರ ಶುರುವಾಗಿದೆ. ಮಾತ್ರವಲ್ಲದೇ ಸಮಾಜಮುಖಿ ಸೇವಾ ಕಾರ್ಯಗಳಿಗೆ ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ರಕ್ತದಾನ, ಅನ್ನ ಸಂತರ್ಪಣೆಯನ್ನು ಅಭಿಮಾನಿಗಳು ಆಯೋಜಿಸಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆನಾಯಕಿಯಾಗಿ ಕಾಲಿವುಡ್‌ನ ಪ್ರಿಯಾ ಆನಂದ್ (Priya Anand) ಜೋಡಿಯಾಗಿದ್ದಾರೆ. ಚೇತನ್ ಕುಮಾರ್ (Chetan Kumar) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies