Oct 29, 2022, 3:17 PM IST
ಅಪ್ಪು ಅಗಲಿ ಇಂದಿಗೆ ಒಂದು ವರ್ಷವಾಗಿದ್ದು, ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ಅಪ್ಪು ಅವರನ್ನು ನೆನೆದು ಪತ್ನಿ ಅಶ್ವಿನಿ ಕಣ್ಣೀರಿಟ್ಟಿದ್ದಾರೆ. ಅಪ್ಪು ಸಮಾಧಿಗೆ ಅವರ ಇಷ್ಟದ ತಿನಿಸನ್ನು ಇಟ್ಟು ಕುಟುಂಬಸ್ಥರು ಪೂಜೆ ಮಾಡಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯಿಂದಲೇ ಗೀತ ನಮನವನ್ನು ಸಲ್ಲಿಸಲಾಗುತ್ತಿದ್ದು, ಅಪ್ಪುವಿನ ನೆಚ್ಚಿನ ಗೀತೆಗಳನ್ನು ಮತ್ತು ಅಪ್ಪು ನಟಿಸಿದ ಗೀತೆಗಳನ್ನು ಹಾಡಿ ಪುನೀತನಿಗೆ ನಮನ ಸಲ್ಲಿಸಲಾಗುತ್ತಿದೆ.