May 23, 2023, 11:32 AM IST
ಮಹಾ ಮಳೆಗೆ ಇಡೀ ಬೆಂಗಳೂರು ತಂಡಾ ಹೊಡೆದಿದೆ. ಮರಗಳು ಬಿದ್ದು ಅವಾಂತರ ಆದ್ರೆ, ಅಂಡರ್ಪಾಸ್‌ನಲ್ಲಿ ನೀರು ನಿಂತು ಮಹಿಳೆ ಒಬ್ಬರ ಪ್ರಾಣವೇ ಹೋಗಿದೆ. ಮನೆ, ಅಂಗಡಿ ಜ್ಯೂವೆಲರಿ ಶಾಪ್ ನೀರಿನಲ್ಲಿ ಮುಳುಗಡೆ ಆಗಿವೆ. ಈ ಮಳೆಯ ಬಿರುಗಾಳಿಗೆ ನವರಸ ನಾಯಕ ಜಗ್ಗೇಶ್‌ಗೂ ತಟ್ಟಿದೆ. ಸುರಿದ ಮಳೆಗೆ ಜಗ್ಗೇಶ್ ಬಿಎಂಡಬ್ಲ್ಯೂ ಕಾರು ಮುಳುಗಿದೆ. ಮನೆ ರಿಪೇರಿ ಅಂತ ಜಗ್ಗೇಶ್ ತನ್ನ ಐಶಾರಾಮಿ ಕಾರನ್ನ ಸ್ನೇಹಿತ ಮುರುಳಿ ಅನ್ನೋರ ಮನೆ ಬಳಿ ನಿಲ್ಲಿಸಿದ್ರು. ಮಳೆಗೆ ಮುರುಳಿ ಅವರ ಮನೆಯ ಕಾರು ಪಾರ್ಕಿಂಗ್ ಜಾಗ ನೀರಿನಿಂದ ತುಂಬಿಕೊಂಡಿದೆ. ಇದ್ರಿಂದ ಐಶಾರಾಮಿ ಬಿಎಂಡಬ್ಲ್ಯೂ ಕಾರು ಮಳೆ ನೀರಿನಿಂದ ಜಲಾವೃತ ಆಗಿದೆ. ತನ್ನ ಐಶಾರಾಮಿ ಕಾರಿನ ಸ್ಥಿತಿಯ ಫೋಟೋ ಕ್ಲಿಸಿಕೊಂಡಿರೋ ಜಗ್ಗೇಶ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಬೇಸರ ಹೊರ ಹಾಕಿದ್ದಾರೆ.
ಇದನ್ನೂ ವೀಕ್ಷಿಸಿ: ಸಲಗವನ್ನೇ ಗೆದ್ದು 'ಭೀಮ'ನಾದ ದುನಿಯಾ ವಿಜಯ್ : ಡಬ್ಬಿಂಗ್‌ನಲ್ಲಿ ಭೀಮನ ಆರ್ಭಟ!