ಸಲಗವನ್ನೇ ಗೆದ್ದು 'ಭೀಮ'ನಾದ ದುನಿಯಾ ವಿಜಯ್ : ಡಬ್ಬಿಂಗ್‌ನಲ್ಲಿ ಭೀಮನ ಆರ್ಭಟ!
ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದ ಡಬ್ಬಿಂಗ್ ಕೆಲಸ ಆರಂಭವಾಗಿದೆ. ಈ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶಿಸಿದ್ದಾರೆ.
ವೀರಸಿಂಹ ರೆಡ್ಡಿ ಸಿನಿಮಾ ಬಳಿಕ ಭೀಮ ಸಿನಿಮಾದಿಂದ ಆರ್ಭಟಿಸಲು ದುನಿಯಾ ವಿಜಯ್ ಸಜ್ಜಾಗಿದ್ದಾರೆ. ಸದ್ಯ ವಿಜಯ್ ಭೀಮನಿಗೆ ಡಬ್ಬಿಂಗ್ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ. ಸ್ವತಃ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡುತ್ತಿರೋ ಭೀಮ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಭೀಮ ಟೀಸರ್ ಭರ್ಜರಿ ಸದ್ದು ಮಾಡುತ್ತಿದೆ.ಅಂದ ಹಾಗೆ ಭೀಮ ಟೈಟಲ್ ಇಡೋಕೆ ಕಾರಣ ಏನು ಗೊತ್ತಾ? ಭೀಮ ಕುರುಕ್ಷೇತ್ರದ ತುಂಬ ಹೋರಾಟವನ್ನೇ ಮಾಡುತ್ತಿರುತ್ತಾನೆ. ಗುರುಗಳನ್ನು ನಂಬಿ ತನ್ನ ಕೆಲಸ ಮಾಡುತ್ತಾನೆ. ವಿದ್ಯಾವಂತ, ತಾಳ್ಮೆ ಇರುವಂಥವನು. ಆದರೆ ಅವನನ್ನು ಕೆಣಕಿದರೆ ಮಾತ್ರ ಸುಮ್ಮನಿರುವುದಿಲ್ಲ. ಈ ಸಿನಿಮಾದಲ್ಲಿಯೂ ನಾಯಕನಿಗೆ ಭೀಮನಂತಹ ಶಕ್ತಿ, ಯುಕ್ತಿ. ಹೋರಾಟದ ಗುಣದ ಜತೆಗೆ ತಾಳ್ಮೆಯೂ ಇರುತ್ತದೆ. ಹಾಗಾಗಿ ಸಿನಿಮಾಗೆ ಈ ಟೈಟಲ್ ಹೊಂದಿಕೆಯಾಗುತ್ತದೆ ಎಂದು ಅನ್ನಿಸಿದ್ದರಿಂದ, ಈ ಟೈಟಲ್ ಇಟ್ಟಿದ್ದಾರಂತೆ. ಇನ್ನು ದುನಿಯಾ ವಿಜಯ್‌ಗೆ ರಂಗಭೂಮಿ ಕಲಾವಿದೆ ಬೆಂಗಳೂರಿನ ಅಶ್ವಿನಿ ಚಿತ್ರದ ನಾಯಕಿಯಾಗಿದ್ದಾರೆ.