ಪಾಗಲ್‌ ಪ್ರೇಮಿ: ತನ್ನ ಜೂಲಿಯಟ್ಗಾಗಿ ರೊಮೀಯೋಯಿಂದ Sorry ನೂರಾರು ಸಾರಿ

May 26, 2022, 5:04 PM IST

ಬೆಂಗಳೂರಿನ ಸುಂಕದಕಟ್ಟೆ ಬಳಿ ಇರುವ ಶಾಂತಿಧಾಮ ಕಾಲೇಜ್ ಬಳಿ ಇರುವ ರಸ್ತೆ, ಕಾಂಪೌಂಡು, ಗೋಡೆಗಳ ಮೇಲೆಲ್ಲ ರಾತ್ರಿ ಬೆಳಗಾಗುವುದರೊಳಗೆ ಕೆಂಪು ಬಣ್ಣದಲ್ಲಿ sorry ಎಂಬ ಪದ ರಾರಾಜಿಸುತ್ತಿತ್ತು. ಅದೂ ಒಂದೆರಡು ಬಾರಿಯಲ್ಲ, ನೂರಾರು ಬಾರಿ ಇಲ್ಲಿನ ಕಾಲೇಜಿನ ಮೆಟ್ಟಿಲು, ರೋಡು, ಗೋಡೆಗಳ ಮೇಲೆ ಸಾರಿ ಬರೆದಿಡಲಾಗಿತ್ತು. ಈ Sorryಗಳ ನಡುವೆ  ಅಲ್ಲಲ್ಲಿ ಇರುವ ಹೃದಯದ ಚಿಹ್ನೆಯೇ ಇದೊಬ್ಬ ಪಾಗಲ್ ಪ್ರೇಮಿಯ ಹುಚ್ಚಾಟ ಎಂಬುದನ್ನು ಸಾರುತ್ತಿತ್ತು. ಬೆಳಗ್ಗೆ ಎದ್ದು ಮನೆಯಿಂದ ಹೊರ ಬಂದ ಸುಂಕದಕಟ್ಟೆ ನಿವಾಸಿಗಳಿಗೆ ಕಣ್ಣು ಹಾಯಿಸಿದಲ್ಲೆಲ್ಲ ಸಾರಿಯೇ ಗುಡ್ ಮಾರ್ನಿಂಗ್ ಹೇಳಿದೆ. 

Shift, Pack & Transport: ಬೆಲೆ ಬಾಳುವ ವಸ್ತುಗಳ ಮೇಲಿರಲಿ ಗಮನ!

ಯಾರು ಈ ಹುಚ್ಚು ಪ್ರೇಮಿ? ಆತ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿತ್ತಾ? ಏತಕ್ಕಾಗಿ ಆತ ಹೀಗೆ ಬರೆದ ಎಲ್ಲಕ್ಕೂ ಉತ್ತರ ಇಲ್ಲಿದೆ..