Mar 25, 2024, 5:40 PM IST
2024ರ ಮತಸಂಗ್ರಾಮ ಹೊಸ ಇತಿಹಾಸ ನಿರ್ಮಿಸೋ ಲಕ್ಷಣಗಳು ಕಾಣ್ತಿದ್ದಾವೆ. ಅದೇನೇನು ಅನ್ನೋದು ಜೂನ್ 4ಕ್ಕೆ ಬಯಲಾಗಲಿದೆ. ಆದ್ರೆ ಅದಕ್ಕು ಮುನ್ನ ರಣರೋಚಕ ಸಂಗ್ರಾಮರಂಗವಾಗಿ ಕಾಣ್ತಾ ಇರೋದು ಮೈಸೂರು.ಮೈಸೂರು(Mysore) ಅಂದ್ರೆ ಮೊದಲಿಗೆ ನೆನಪಾಗೋದು, ದೇವಿ ಚಾಮುಂಡೇಶ್ವರಿ ದೇವಾಲಯ. ಅದರ ಜೊತೆಜೊತೆಯಲ್ಲೇ ನೆನಪಾಗೋದು ನಾಡಹಬ್ಬ ದಸರಾ(Dasara) ಹಾಗೂ ಆ ದಸರಾ ನಡೆಸೋ, ಮೈಸೂರಿನ ರಾಜ ಪರಂಪರೆ. ಮೈಸೂರು ಅರಸರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತೆ. ಬೇರಾವ ರಾಜ್ಯದಲ್ಲೂ ಇಲ್ಲದಷ್ಟು ರಾಜಗೌರವ, ರಾಜ ಮನ್ನಣೆ ಇಲ್ಲಿರೋ, ಯದುವಂಶದ ವಿಭುಗಳಿಗಿದೆ. ಅಂದ್ ಹಾಗೆ, ಎಲೆಕ್ಷನ್ ಹೊತ್ತಲ್ಲಿ ಈ ರಾಜಸಂಸ್ಥಾನದ ಬಗ್ಗೆ ಮಾತಾಡೋಕೆ ಕಾರಣವಾಗಿರೋದು, ಯದುವೀರ ಕೃಷ್ಣದತ್ತ ಒಡೆಯರ್(Yaduveer Krishnadatta Chamaraja Wadiyar), ರಾಜಕೀಯ ಪ್ರವೇಶ. ಯದುವೀರರು ಈ ಬಾರಿ ಚುನಾವಣಾ ರಣಾಂಗಣಕ್ಕೆ ಧುಮುಕಿದ್ದಾರೆ. ಬಿಜೆಪಿ ಪಕ್ಷದಿಂದ, ಅಖಾಡಕ್ಕಿಳಿದಿದ್ದಾರೆ. ಹೊಸದೊಂದು ಇತಿಹಾಸ ನಿರ್ಮಿಸೋಕೆ ಹೊರಟಿದ್ದಾರೆ. ಯದುವೀರರು ರಾಜಕೀಯಕ್ಕೆ(Politics) ಪ್ರವೇಶ ಮಾಡಿದ್ದಾಗಿದೆ. ಮೈಸೂರು ಅರಸು ಕುಟುಂಬದಿಂದ, ಜಯಚಾಮರಾಜೇಂದ್ರ ಒಡೆಯರು ರಾಜಕಾರಣದ ಪ್ರಮುಖ ಹುದ್ದೆ ಅಲಂಕರಿಸಿದ್ರು.. ನವೆಂಬರ್ 1956ರಿಂದ ರಿಂದ 1963ರವರೆಗೆ ರಾಜ್ಯದ ರಾಜಪಾಲರಾಗಿದ್ರು. ಮೈಸೂರು ಸಂಸ್ಥಾನದಿಂದ ಶ್ರೀಕಂಠ ದತ್ತ ಒಡೆಯರು ರಾಜಕೀಯಕ್ಕೆ ಬಂದಿದ್ರು. ಸರ್ಕಾರ ಕೊಟ್ಟಿದ್ದ ದೊಡ್ಡ ಹುದ್ದೆಯನ್ನೂ ಬೇಡ ಅಂದು ಬಂದ ಜಯಚಾಮರಾಜೇಂದ್ರ ಒಡೆಯರು, ಕಡೆಗೆ ಸಿಂಹಾಸನವನ್ನೂ ತೊರೆದರು.
ಇದನ್ನೂ ವೀಕ್ಷಿಸಿ: Loksabha Eection 2024: ಬಿಜೆಪಿ 5ನೇ ಲಿಸ್ಟ್‌ನಲ್ಲಿ ನಟಿ ಕಂಗನಾಗೆ ಟಿಕೆಟ್: ಉತ್ತರ ಪ್ರದೇಶ ಅಖಾಡದಿಂದ ಗಾಂಧಿ ಪರಿವಾರ ದೂರ..!