ವಾಸ್ತು ಮೊರೆ ಹೋಗಿ ಪುರಾತನ ಕಾಲದ ಮರಗಳಿಗೆ ಡಿಸಿಎಂ ಕೊಡಲಿ ಏಟು!

Jul 25, 2021, 8:21 PM IST

ಬೆಂಗಳೂರು, (ಜು.25): ಮರ ಬೆಳೆಸಿ, ಪರಿಸರ ಉಳಿಸಿ ಅಂತೆಲ್ಲಾ ರಾಜಕೀಯ ನಾಯಕರು ಗಂಟೇ ಗಟ್ಟಲೇ ಪುಕ್ಕಟೆ ಭಾಷಣ ಮಾಡಿ ಎದ್ದು ಹೋಗ್ತಾರೆ. 

6300 ಮರ ಕಡಿತಕ್ಕೆ ‘ನಮ್ಮ ಬೆಂಗಳೂರು’ ವಿರೋಧ

ಆದ್ರೆ, ಬೇಲಿಯೇ ಎದ್ದು ಹೊಲ ಮೆಯ್ದಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಮ್ಮ ಸರ್ಕಾರಿ ಮನೆಗೆ ಅಡ್ಡಿ ಆಯ್ತು ಎಂದು ವಾಸ್ತು ಮೊರೆ ಹೋಗಿ ಪುರಾತನ ಕಾಲದ ಬೃಹತ್ ಆಕಾರದ ಮರಗಳಿಗೆ ಕೊಡಲಿ ಏಟು ಹಾಕಿದ್ದಾರೆ.