ಪಕ್ಷಕ್ಕೆ ಶ್ರೀರಾಮುಲು ಮುಖ್ಯವಲ್ಲ: ಉರಿಯುವ ಬೆಂಕಿಗೆ ತುಪ್ಪ ಸುರಿದ ಬಿಜೆಪಿ ಹಿರಿಯ ನಾಯಕ

Dec 14, 2019, 4:00 PM IST

ಬೆಂಗಳೂರು, (ಡಿ.14): ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಮತಗಳನ್ನ ಬಿಜೆಪಿ ತಿರುಗಿಸುವಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಾತ್ರ ಬಹುದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಅವರನ್ನ ಉಪಮುಖ್ಯಮಂತ್ರಿ ಮಾಡಬೇಕೆನ್ನುವ ಚರ್ಚೆ ಬಿಜೆಪಿ ಹೈಕಮಾಂಡ್‌ನಲ್ಲೂ ಸಹ ನಡೆದಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಎಲೆಕ್ಷನ್‌ನಲ್ಲಿ ಶ್ರೀರಾಮುಲು ಶಕ್ತಿ ಮೀರಿ  ಬಿಜೆಪಿ ಗೆಲುವಿಗೆ ಶ್ರಮಪಟ್ಟರು.

BSYಯಿಂದ ಶ್ರೀರಾಮುಲು ಅಂತರ ಕಾಯ್ದುಕೊಳ್ತಿರೋದೇಕೆ?: ಇಲ್ಲಿವೆ 7 ಕಾರಣಗಳು

ಅಷ್ಟೇ ಅಲ್ಲದೇ ನಮ್ಮ ಸಮುದಾಯದ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗುತ್ತೆ ಅಂತ ವಾಲ್ಮೀಕಿ ಸಮುದಾಯ ಸಹ ಬಿಜೆಪಿಗೆ ವಾಲಿದೆ. ಆದ್ರೆ, ಕೊನೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಪಟ್ಟ ಕೈತಪ್ಪಿದ್ದು, ವಾಲ್ಮೀಕಿ ಸಮುದಾಯ ಆಕ್ರೋಶಗೊಂಡಿದೆ. ಅಷ್ಟೇ ಅಲ್ಲದೇ ಕೇಳದ ಸಚಿವ ಸ್ಥಾನ ಸಿಗಲಿಲ್ಲವೆಂದು ರಾಮುಲು ಸಹ ಮುನಿಸಿಕೊಂಡಿದ್ದಾರೆ. 

ಇದರ ಮಧ್ಯೆ ಬಿಜೆಪಿ ನಾಯಕರೊಬ್ಬರು ಶ್ರೀರಾಮುಲು ಬಿಜೆಪಿಗೆ ಮುಖ್ಯವಲ್ಲ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದ್ದಿದ್ದಾರೆ. ಹಾಗಾದ್ರೆ ಯಾರು ಆ ನಾಯಕ..? ಇನ್ನೂ ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ..