Dec 19, 2022, 3:40 PM IST
ಸದನದಲ್ಲಿ ಸಾವರ್ಕರ್ ಫೋಟೋ ಅಳವಡಿಕೆಗೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದು, ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಬೆಳಗಾವಿಯಲ್ಲಿ ಕಿಡಿ ಕಾರಿದ್ದಾರೆ. ಸಾವರ್ಕರ್ ಬ್ರಿಟಿಷರಿಗೆ ಕ್ಷಮೆ ಕೇಳಿದವರು, ಅಂಚೆ ಚೀಟಿ ಬಿಡುಗಡೆ ಮಾಡಿದ್ದು ಇವರೊಬ್ಬರದ್ದೇ ಅಲ್ಲ. ಸದನದ ಒಳಗೂ ಪ್ರತಿಭಟನೆ ಮಾಡುತ್ತೇವೆ ಸಾವರ್ಕರ್ ಫೋಟೋ ಹಾಕಿದ್ದು ತಪ್ಪು. ಗಾಂಧಿಜೀ ಫೋಟೋ ಅನಾವರಣಕ್ಕೆ ಆಹ್ವಾನ ನೀಡಿ, ಸಾವರ್ಕರ್ ಫೋಟೋ ಲೋಕಾರ್ಪಣೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.