Dec 19, 2022, 4:16 PM IST
ಬೆಳಗಾವಿ ಸುವರ್ಣ ಸೌಧದಲ್ಲಿ ಸಾವರ್ಕರ್ ಸಮರ ನಡೆದಿದ್ದು, ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋಗೆ ಕಾಂಗ್ರೆಸ್ ವಿರೋಧ , ವ್ಯಕ್ತಪಡಿಸಿದೆ. ಕವಿಗಳು, ಹೋರಾಟಗಾರರ ಫೋಟೋ ಹಿಡಿದು ಸುವರ್ಣ ಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಧರಣಿ ನಡೆಸಿದ್ದು, ವಲ್ಲಭಬಾಯಿ ಪಟೇಲ್, ಶಿಶುನಾಳ ಶರೀಫರು ಹಾಗೂ ಬಾಬು ಜಗಜೀವನ್ ರಾಮ್ ಫೋಟೊ ಹಿಡಿದು ಧರಣಿ ನಡೆಸಿದೆ.