Aug 29, 2022, 4:08 PM IST
ಬೆಂಗಳೂರು (ಆ. 29): ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಮಿಷನ್ 123 ಹೆಸರಿನಲ್ಲಿ ಕೆಲಸ ಆರಂಭಿಸಿದೆ. ಅಂದರೆ, 123 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎನ್ನುವ ಗುರಿ. ಇದರ ಬಗ್ಗೆ ರಾಜ್ಯ ರಾಜಕಾರಣದ ವರ್ಣರಂಜಿತ ವ್ಯಕ್ತಿತ್ವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಹೇಳಿದ್ದೇನು?
ಪುಗ್ಸಟ್ಟೆ ಸಿಗೋದಾದ್ರೆ, 200 ಅಂತಾರೆ, 220 ಅಂತಾರೆ. ಆದರೆ, ನಾವು ಎಲ್ಲಾ ಚರ್ಚೆಗಳನ್ನು ಆಧರಿಸಿ, ಪರಿಶೀಲನೆ ನಡೆಸಿಯೇ 123 ಗೆಲುವಿನ ಗುರಿ ನಿಗದಿ ಮಾಡಿದ್ದೇವೆ. ಉಳಿದವು ವಿರೋಧ ಪಕ್ಷಗಳೇ ಇರಬೇಕು ಎನ್ನುವುದು ನಮ್ಮ ಆಸೆ ಎಂದು ಹೇಳಿದರು. ನಮ್ಮ ಯೋಜನೆಗಳನ್ನು ಪ್ರಶ್ನೆ ಮಾಡೋರು ಬೇಕು. ಎಲ್ಲವೂ ನಾವೇ ಆದರೆ, ನಾವು ಮಾಡಿದ್ದೇ ನ್ಯಾಯವಾಗುತ್ತದೆ.
ಯಡಿಯೂರಪ್ಪನನ್ನ ಇನ್ನೂ ಶೂದ್ರರನ್ನಾಗಿಯೇ ನೋಡಲಾಗ್ತಿದೆ: ಸಿಎಂ ಇಬ್ರಾಹಿಂ
ನಮ್ಮ ರಾಜ್ಯದಲ್ಲಿ ಜಾತೀವಾರು ಲೆಕ್ಕಾಚಾರವಿಲ್ಲ. ಇಲ್ಲಿರೋದು ಪಂಚಶಕ್ತಿಗಳು. ದಲಿತರು, ಅಲ್ಪಸಂಖ್ಯಾತರು, ಒಕ್ಕಲಿಗರು, ಲಿಂಗಾಯತರು ಹಾಗೂ ಹಿಂದುಳಿದವರು. ಇವರ ಸಮೀಕರಣದಲ್ಲಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ಜೆಡಿಎಸ್ ಎನ್ನುವುದು ಚಿಂತನಾಶಿಬಿರದ ಪಕ್ಷ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.