Oct 22, 2021, 2:35 PM IST
ರಾಮನಗರ, (ಅ.22): ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ವಿಚಾರ ಜೋರಾಗಿ ಚರ್ಚೆಯಾಗಿ ತಣ್ಣಗಾಗಿರುವ ಹೊತ್ತಲ್ಲಿ ಇದೀಗ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದ ಹಾಗೇ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಮುಂದಿನ ಸಿಎಂ ಎಂದು ಹೇಳಿದ್ದಾರೆ.
ಮುಂದಿನ ಸಿಎಂ ಬಗ್ಗೆ ಯಾರೂ ಹೇಳಿಕೆ ನೀಡಬೇಡಿ: ಸಿದ್ದರಾಮಯ್ಯ
ಸದ್ಯ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಗಲಾಟೆ ಹೆಚ್ಚಾಗಿ ತಣ್ಣಗಾಗಿದೆ. ಈ ಸಮಯದಲ್ಲಿ ಮಾಗಡಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ, 'ಕುಮಾರಸ್ವಾಮಿ ಗೆ ಸಿಎಂ ಮಾಡಿದ್ದಾಯ್ತು, ಮುಂದೆ ನಮ್ಮ ಜಿಲ್ಲೆಯ ಡಿ.ಕೆ. ಶಿವಕುಮಾರ್ ಗೆ ಅವಕಾಶ.. ಡಿಕೆಎಸ್ ನಮ್ಮ ಮುಂದಿನ ಸಿಎಂ ಎಂದಿದ್ದಾರೆ.