Dec 19, 2022, 10:40 AM IST
ಬೆಳಗಾವಿ: ಚಳಿಗಾಲ ಅಧಿವೇಶನದ ಮೊದಲ ದಿನವೇ ಸಾವರ್ಕರ್ ಕದನ ಕಾವೇರಲಿದೆ. ಸಭಾಂಗಣದಲ್ಲಿ ಸಾವರ್ಕರ್ ಫೋಟೋ ಅಳವಡಿಕೆಗೆ ಸಿದ್ಧತೆ ನಡೆದಿದ್ದು, ಪ್ರತಿಪಕ್ಷಗಳಿಗೆ ಶಾಕ್ ಕೊಡಲು ಆಡಳಿತ ಪಕ್ಷದಿಂದ ಪ್ಲಾನ್ ನಡೆಸಲಾಗಿದೆ. ಸಾವರ್ಕರ್ ಫೋಟೋ ಅನಾವರಣದ ವೇಳೆ ಗಲಾಟೆ ಸಾಧ್ಯತೆಯಿದ್ದು, ಒಳಗೆ ಸಾವರ್ಕರ್ ಕದನ ಹಾಗೂ ಹೊರಗೆ ಮೀಸಲಾತಿ ಪ್ರತಿಭಟನೆ ನಡೆದಿದೆ. ಅಧಿವೇಶನದ ಮೊದಲ ದಿನವೇ ಮೂರು ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ. ಬಸ್ತವಾಡ ಗ್ರಾಮದ ಬಳಿ ನಿರ್ಮಿಸಿರುವ ಟೆಂಟ್‌ನಲ್ಲಿ ಪ್ರತಿಭಟನೆ ನಡೆದಿದೆ. ರೈತ ಸಂಘದ ಎರಡು ಬಣಗಳಿಂದ ಪ್ರತ್ಯೇಕ ಪ್ರತಿಭಟನೆ ನಡೆದಿದ್ದು, ಗ್ರಾಮ ಪಂಚಾಯತ್ ನೌಕರರ ಸಂಘದಿಂದಲೂ ಹೋರಾಟ ಶುರುವಾಗಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ, ಸುವರ್ಣ ಸೌಧಕ್ಕೆ ಮುತ್ತಿಗೆಯ ವಾರ್ನಿಂಗ್ ನೀಡಲಾಗಿದೆ.