Oct 30, 2022, 3:02 PM IST
ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ಬಳಿಕ ಕಾರ್ಯ ಯೋಜನೆ ಜಾರಿ ಮಾಡಲಿದೆ. ಡಿಸೆಂಬರ್ ಮೊದಲ ವಾರದಲ್ಲೇ 150 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದ್ದು, ರಾಜ್ಯದ ದಶ ದಿಕ್ಕುಗಳಲ್ಲೂ ಕಾಂಗ್ರೆಸ್ ನಾಯಕರ ಯಾತ್ರೆ ಶುರುವಾಗಲಿದೆ. ಡಿಸೆಂಬರ್'ನಲ್ಲಿ ಎರಡು ಮಾರ್ಗದಲ್ಲಿ ಪ್ರವಾಸ ಆರಂಭಿಸಲಿದ್ದು, ಕಾಂಗ್ರೆಸ್ ಮೊದಲ ತಂಡಕ್ಕೆ ಸಿದ್ದರಾಮಯ್ಯ ಹಾಗೂ ಎರಡನೇ ತಂಡಕ್ಕೆ ಡಿಕೆಶಿ ನೇತೃತ್ವ ವಹಿಸಲಿದ್ದಾರೆ. ತಲಾ 14 ಲೋಕಸಭಾ ಕ್ಷೇತ್ರದಲ್ಲಿ ಸಿದ್ದು, ಡಿಕೆಶಿ ಯಾತ್ರೆ ಶುರುವಾಗಲಿದೆ.