Dec 2, 2022, 3:40 PM IST
ಶಿವಮೊಗ್ಗದಲ್ಲಿ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ತಯಾರಿ ನಡೆದಿದೆ. ಜನವರಿ, ಫೆಬ್ರವರಿ ಕೊನೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಮಾವೇಶಕ್ಕೆ ತಯಾರಿ ನಡೆದಿದ್ದು, ಎಸ್. ಬಂಗಾರಪ್ಪ, ಸಿದ್ದರಾಮಯ್ಯ, ದೇವರಾಜ್ ಅರಸು, ಮೊಯ್ಲಿ ಜನಾರ್ದನ ಪೂಜಾರಿ ಕೊಡುಗೆ ಬಗ್ಗೆ ಹಿಂದುಳಿದ ವರ್ಗಕ್ಕೆ ವಿವರಣೆ ನೀಡಲಾಗುತ್ತದೆ. ಸಮಾವೇಶ ಹಿನ್ನೆಲೆ ಮಧು ಬಂಗಾರಪ್ಪ ಪ್ರವಾಸ ಆರಂಭಿಸಿದ್ದು, ಹಿಂದುಳಿದ ಸಮುದಾಯಗಳ ಭೇಟಿ ಹಾಗೂ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಶಿವಮೊಗ್ಗದಿಂದ ರಾಜಕೀಯ ಸಂದೇಶ ರವಾನೆಗೆ ಕೈ ನಾಯಕರ ಪ್ಲಾನ್ ಇದಾಗಿದ್ದು, ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ KGF ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ