Apr 4, 2024, 10:44 AM IST
ಮಂಡ್ಯ(ಏ.04): ಸುಮಲತಾ ಅಂಬರೀಷ್ ಮಂಡ್ಯವನ್ನ ಬಿಟ್ಟಿಲ್ಲ. ಆದರೆ, ಸ್ಪರ್ಧೆ ಮಾಡ್ತಾ ಇಲ್ಲ. ಹಾಗಾದ್ರೆ.. ಸುಮಲತಾ ಅವರಿಗೆ ಹಿನ್ನಡೆಯಾಯ್ತಾ? ತಾವು ಸೋತಿದ್ದ ಕ್ಷೇತ್ರದಲ್ಲಿ ಕುಮಾರಸ್ವಾಮಿ, ಈ ಬಾರಿ ಗೆಲ್ತಾರಾ..? ಮಂಡ್ಯ ಗೇಮ್ ಅರ್ಥ ಮಾಡ್ಕೊಳ್ಳೋದು ಅಷ್ಟು ಈಸಿ ಇಲ್ಲ.
ಜಸ್ಟ್ 5 ವರ್ಷದಲ್ಲಿ ಮಂಡ್ಯ ರಣರಂಗದಲ್ಲಿ ಶತ್ರುಗಳಾಗಿದ್ದವರೇ.. ಮಿತ್ರರಾಗೋದಕ್ಕೆ ಮುಂದಾಗಿರೋ ಕಥೆ ಇದು. ಅಫ್ಕೋರ್ಸ್.. ಆಗ ಮಿತ್ರರಾಗಿದ್ದವರೇ.. ಈ ಬಾರಿ ಶತ್ರುಗಳು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಸುಮಲತಾ ಅವರು ಇಟ್ಟಿರೋ ಹೆಜ್ಜೆ ಹಿಂದೆ ರೋಚಕ ಕಥೆ ಇದೆ.
5 ವರ್ಷದ ರಾಜಕೀಯ. 5 ಕಾರಣಗಳು. ಅದರ ಹಿಂದೆ ಇತಿಹಾಸದ ಅನುಭವ, ವಾಸ್ತವದ ಅರ್ಥ ಮತ್ತು ಭವಿಷ್ಯದ ಲೆಕ್ಕಾಚಾರ.. ಎಲ್ಲವೂ ಇದೆ. ಅವುಗಳನ್ನ ಒಂದೊಂದಾಗಿ ನೋಡ್ತಾ ಹೋದ್ರೆ.. ಕಂಪ್ಲೀಪ್ ಪಿಕ್ಚರ್ ಅರ್ಥ ಆಗುತ್ತೆ. ಗೆಲ್ಲೋದು ಸೋಲೋದು ಆಮೇಲೆ. ಆದರೆ.. ಗೇಮ್ ಚೇಂಜರ್ ಆಗೋದು ಮಾತ್ರ ಮತದಾರ. ಲಾಸ್ಟ್ ಎಲೆಕ್ಷನ್‌ನಲ್ಲಿ ಕಾಂಗ್ರೆಸ್+ಜೆಡಿಎಸ್ ಲೆಕ್ಕ ವರ್ಕೌಟ್ ಆಗಿರಲಿಲ್ಲ. ಅದಕ್ಕೆ ಜೆಡಿಎಸ್ ನಾಯಕರ ಕೊಡುಗೇನೂ ಅಷ್ಟೇ ಇತ್ತು ಬಿಡಿ. ಆದರೆ, ಈ ಬಾರಿ ಬಿಜೆಪಿ+ಜೆಡಿಎಸ್ ವೋಟಿನ ಲೆಕ್ಕ ನೋಡಿದ್ರೆ ಹೇಗಿರುತ್ತೆ? ಜಸ್ಟ್ ನಂಬರ್ ಗೇಮ್.