ಬಸ್‌ನಲ್ಲಿ ಅಜ್ಜಿಯರ ರಾಜಕೀಯ ಡಿಬೇಟ್‌: ಕ್ಷೇತ್ರದ ಶಾಸಕರ ಗೆಲುವು -ಸೋಲಿನ ಬಗೆಗಿನ ಚರ್ಚೆ ವಿಡಿಯೋ ವೈರಲ್

Jul 15, 2023, 12:09 PM IST

ವಿಜಯನಗರ : ರಾಜಕೀಯದ ಬಗ್ಗೆ ದೊಡ್ಡವರು ಮಾತನಾಡೋದಷ್ಟೇ ಅಲ್ಲ, ಪ್ರಪಂಚದ ಬಗ್ಗೆ ಅಷ್ಟಾಗಿ ಗೊತ್ತಿರದ‌ ಇಬ್ಬರು ಅಜ್ಜಿಯಂದಿರು(grandmothers) ಗಂಭೀರ ಚರ್ಚೆ ಮಾಡಿದ್ದಾರೆ. ಬಸ್‌ನಲ್ಲಿ(Bus) ಕುಳಿತ ಅಜ್ಜಿಯಂದಿರು ತಮ್ಮ ಕ್ಷೇತ್ರದ ಶಾಸಕರ ಗೆಲುವು ಸೋಲಿನ ಬಗ್ಗೆ ಮಾತನಾಡಿರೋ ವಿಡಿಯೋ ಸದ್ಯ ವೈರಲ್ ಅಗಿದೆ. ಹಾಲಿ ಶಾಸಕ- ಮಾಜಿ ಶಾಸಕರ ಬಗ್ಗೆ ಅಜ್ಜಿಯರು ಭಾರಿ ಚರ್ಚೆ ಮಾಡಿದ್ದಾರೆ. ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಹಾಲಿ ಶಾಸಕ ನೇಮಿರಾಜ್ ನಾಯ್ಕ್, ಮಾಜಿ ಶಾಸಕ ಭೀಮಾನಾಯ್ಕ್ ಬಗ್ಗೆ ಚರ್ಚೆ ಮಾಡಲಾಗಿದೆ. ಈಗಷ್ಟೇ ನೇಮಿರಾಜ್ ನಾಯ್ಕ್ ಗೆದ್ದಿದ್ದಾರೆ. ಏನಾದರೂ ಕೆಲಸ ಮಾಡ್ತಾನೆ ಅಂತ ಅಜ್ಜಿ ಚರ್ಚೆ(Discussion) ಪ್ರಾರಂಭ ಮಾಡುತ್ತಾರೆ. ಭೀಮಾನಾಯ್ಕ್ (Bheema naik) ಕೂಡ ಕೆಲಸ ಮಾಡಿದ್ದಾನೆ. ನೇಮಿರಾಜ್ ನಾಯ್ಕ್ (Nemiraj Naik) ಈ ಹಿಂದೆ ಗೆದ್ದಿದ್ದ. ಏನು ಮಾಡಿದ್ದಾನೆ ಹೇಳಿ ಅಂತ ಮತ್ತೊಬ್ಬ ಮಹಿಳೆ ಮಾತನಾಡ್ತಾಳೆ. ಭೀಮಾನಾಯ್ಕ್ ನಮ್ಮೂರಿಗೆ ಏನು ಮಾಡಿಲ್ಲ , ಅಂತ ಅಜ್ಜಿ ಅಂದ್ರೆ, ನೇಮಿರಾಜ್ ನಾಯ್ಕ್ ಕೂಡ ಏನು ಮಾಡಿಲ್ಲ ಅಂತ ಮತ್ತೊಬ್ಬ ಅಜ್ಜಿ ವಾದ ಮಾಡಿದ್ದಾರೆ. ಎಲೆಕ್ಷನ್ ಟೈಂನಲ್ಲಿ ನೇಮಿರಾಜ್ ನಾಯ್ಕ್ ಭಾರಿ ಕಣ್ಣರು ಹಾಕಿದ. ಹೀಗಾಗಿ ಗೆದ್ದ..‌ಆಗ ಹೌದೌದು ಎಂದು ಮತ್ತೊಬ್ಬ ಅಜ್ಜಿ ಹೇಳುತ್ತಾರೆ. ಬಸ್ ನೊಳಗೆ ಚರ್ಚೆ ನಡೆಸುತ್ತಿರೋ ಇಬ್ಬರು ಅಜ್ಜಿಯಂದಿರ ವಿಡಿಯೋ ಸದ್ಯ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಸಿನಿಮೀಯ ಶೈಲಿಯಲ್ಲಿ ಲೋಕಾಯುಕ್ತ ಬಲೆಗೆ ಫುಡ್ ಇನ್‌ಸ್ಪೆಕ್ಟರ್‌: ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನ..!