ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟಕ್ಕೆ ಲಾಬಿ, ಡಿಕೆಶಿ ಶಕ್ತಿ ಬಗ್ಗೆ ಹೈಕಮಾಂಡ್‌ಗೆ ಅನುಮಾನ..?

Jan 25, 2021, 5:00 PM IST

ಬೆಂಗಳೂರು (ಜ. 25): ಕಾಂಗ್ರೆಸ್‌ನಲ್ಲಿ ದಲಿತ ಎಡಗೈ, ಹಾಗೂ ಬಲಗೈ ನಡುವೆ ಫೈಟ್ ಶುರುವಾಗಿದೆ. ಇದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ತಲೆನೋವಾಗಿದೆ. ದಲಿತ ಎಡಗೈ ಸಮುದಾಯವನ್ನು ಕಾಂಗ್ರೆಸ್‌ ಪಕ್ಷ ನಿರ್ಲಕ್ಷಿಸಿದೆ. ಕೆಪಿಸಿಸಿಗೆ ಐದು ಮಂದಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದರೂ ಮಾದಿಗ ಸಮುದಾಯದ ಒಬ್ಬರನ್ನೂ ನೇಮಕ ಮಾಡಿಲ್ಲ. ಈ ಕೂಡಲೇ ಸಮುದಾಯದ ಒಬ್ಬರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ರಾಜ್ಯಸಭೆ ಸದಸ್ಯ ಎಲ್‌. ಹನುಮಂತಯ್ಯ, ಮಾಜಿ ಸಚಿವ ಆರ್‌.ಬಿ. ತಿಮ್ಮಾಪುರ ಮತ್ತಿತರ ಮುಖಂಡರೊಂದಿಗೆ ಭೇಟಿ ನೀಡಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರಿಗೆ ಎಚ್‌. ಆಂಜನೇಯ ಮನವಿ ಸಲ್ಲಿಸಿದ್ದಾರೆ. 

ಬಿಎಸ್‌ವೈ ಸಂಪುಟಕ್ಕೆ ರಾಜಿನಾಮೆ ವಿಚಾರ : ಆನಂದ್‌ ಸಿಂಗ್ ಹೇಳಿದ್ದಿಷ್ಟು