ಏನ್ ಹೇಳ್ತಾ ಇದೆ ಸಿಎಂ, ಡಿಸಿಎಂ ಕೈ ಸೇರಿದ ಗ್ರೌಂಡ್ ರಿಪೋರ್ಟ್? ಮೈತ್ರಿಬಲವನ್ನು ಮೆಟ್ಟಿ ನಿಂತು ಇತಿಹಾಸ ನಿರ್ಮಿಸುತ್ತಾ ಕಾಂಗ್ರೆಸ

May 16, 2024, 11:56 AM IST

ಬೆಂಗಳೂರು(ಮೇ.16):  ರಾಜ್ಯದಲ್ಲಿ 20 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ ಅಂತ ಸಿಎಂ ಮತ್ತು ಡಿಸಿಎಂ ಎದೆ ತಟ್ಟಿ ಹೇಳ್ತಾ ಇದ್ದಾರೆ. ಕಾಂಗ್ರೆಸ್'ಗೆ ಕನಿಷ್ಠ 14 ಸ್ಥಾನ ಫಿಕ್ಸ್ ಅಂತ ಪಕ್ಷದ ಗ್ರೌಂಡ್ ರಿಪೋರ್ಟ್ ಹೇಳ್ತಾ ಇದೆ. ಹಾಗಾದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಪಡೆಯ ಕಥೆಯೇನು..? ಮೈತ್ರಿವ್ಯೂಹವನ್ನು ಮೆಟ್ಟಿ ನಿಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಯ್ತಾ..? ಹೌದು ಅನ್ನೋದಾದ್ರೆ, ಕಾಂಗ್ರೆಸ್'ಗೆ ಸಿಕ್ಕಿರೋ ಈ ವಿಜಯಮಂತ್ರದ ಗುಟ್ಟೇನು..?.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲೋದು ಯಾರು..? ಕಾಂಗ್ರೆಸ್ಸಾ, ಬಿಜೆಪಿ-ಜೆಡಿಎಸ್ ಮೈತ್ರಿಪಡೆಯಾ..? ಈ ಪ್ರಶ್ನೆಗೆ ಉತ್ತರ ಕೊಟ್ಟಿದೆ ಕಾಂಗ್ರೆಸ್ ಕೈ ಸೇರಿರುವ ಗ್ರೌಂಡ್ ರಿಪೋರ್ಟ್. ಆ ರಿಪೋರ್ಟ್ ಪ್ರಕಾರ ಕಾಂಗ್ರೆಸ್'ಗೆ ಕನಿಷ್ಠ 14 ಸ್ಥಾನ ಫಿಕ್ಸ್. ಗರಿಷ್ಠ 20 ರೀಚ್ ಆದ್ರೂ ಅಚ್ಚರಿಯಿಲ್ಲ. ಹಾಗಾದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಪಡೆಯ ಕಥೆಯೇನು..? ಮೈತ್ರಿವ್ಯೂಹವನ್ನು ಮೆಟ್ಟಿ ನಿಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಯ್ತಾ..? ಕಾಂಗ್ರೆಸ್'ಗೆ ಸಿಕ್ಕಿರೋ ಈ ವಿಜಯಮಂತ್ರದ ಗುಟ್ಟೇನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!

ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ಪ್ರಕರಣ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದ್ಯಾ..? ಈ ಬಗ್ಗೆ ಕಾಂಗ್ರೆಸ್'ನ ಗ್ರೌಂಡ್ ರಿಪೋರ್ಟ್ ಹೇಳೋದೇನು..?. 

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸ್ಫೋಟಗೊಂಡ ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ಪ್ರಕರಣ ಮೈತ್ರಿಪಡೆಗೆ ಭಾರೀ ಮುಜುಗರ ತಂದಿತ್ತು. ಹಾಗಾದ್ರೆ ಈ ಪ್ರಕರಣ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದ್ಯಾ..? ಈ ಬಗ್ಗೆ ಕಾಂಗ್ರೆಸ್'ನ ಗ್ರೌಂಡ್ ರಿಪೋರ್ಟ್ ಹೇಳೋದೇನು..? 

ಗ್ರೌಂಡ್ ರಿಪೋರ್ಟ್ ಹೇಳಿದ್ದೇ ನಿಜವಾಗಿ ಕಾಂಗ್ರೆಸ್ ಕನಿಷ್ಠ 14 ಸ್ಥಾನಗಳನ್ನು ಗೆದ್ದರೆ, ಕರ್ನಾಟಕದ ಮಟ್ಟಿಗೆ ಅದು ದೊಡ್ಡ ಸಾಧನೆ. ಅದೇ, ಕಮಲದಳ ಮೈತ್ರಿಗೆ 14 ಸ್ಥಾನಗಳಷ್ಟೇ ಸಿಕ್ಕಿದ್ರೆ, ಅದು ಜೆಡಿಎಸ್'ಗಿಂತಲೂ ಬಿಜೆಪಿಗೆ ಬಿಗ್ ಶಾಕ್. ಅಷ್ಟಕ್ಕೂ ಕಾಂಗ್ರೆಸ್'ನ ಗ್ರೌಂಡ್ ರಿಪೋರ್ಟೇ ನಿಜವಾಗುತ್ತಾ..? ಮತದಾರ ಬರೆದ ಕ್ಲೈಮ್ಯಾಕ್ಸ್ ಕಥೆ ಬೇರೆಯೇ ಇದ್ಯಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗೋದು ಜೂನ್ 4ಕ್ಕೆ. 

ನಾವೀಗ ತೋರಿಸಿದ ಅಂಕಿ-ಅಂಶಗಳು ಹೇಳೋ ಪ್ರಕಾರ ಕಳೆದ 20 ವರ್ಷಗಳಲ್ಲಿ, ಅಂದ್ರೆ 2004ರಿಂದ ನಡೆದ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಒಮ್ಮೆಯೂ ಡಬಲ್ ಡಿಜಿಟ್ ನಂಬರ್ ರೀಚ್ ಆಗಿಯೇ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ನಿರಂತರವಾಗಿ ಮುಗ್ಗರಿಸುತ್ತಲೇ ಬಂದಿದೆ. ಹಾಗಾದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊನೇ ಬಾರಿ ಸಿಂಗಲ್ ಡಿಜಿಟ್ ದಾಟಿ ಡಬಲ್ ಡಿಜಿಟ್, ಅಂದ್ರೆ ಕನಿಷ್ಠ 10 ಸೀಟುಗಳನ್ನು ಕೊನೆಯ ಬಾರಿ ಗೆದ್ದದ್ದು ಯಾವಾಗ ಗೊತ್ತಾ..? ಬರೋಬ್ಬರಿ 25 ವರ್ಷಗಳ ಹಿಂದೆ.