ಕಲಬುರಗಿ ಪಾಲಿಟಿಕ್ಸ್ ಬೆಂಗಳೂರಿಗೆ ಶಿಫ್ಟ್, ಇಲ್ಲಿಂದಲೇ ಹೊರಬೀಳಲಿದೆ ತೀರ್ಮಾನ!

Sep 10, 2021, 5:44 PM IST

ಕಲಬುರಗಿ/ ಬೆಂಗಳೂರು(ಸೆ. 10)   ಕಲಬುರಗಿ ಪಾಲಿಕೆ ಗದ್ದುಗೆ ಫೈಟ್ ಬೆಂಗಳೂರಿಗೆ ಶಿಫ್ಟ್ ಆಗಿದೆ. ಮೇಯರ್ ಗಾದಿಗಾಗಿ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಬೆಂಗಳೂರಿಗೆ ಹತ್ತಕ್ಕೂ ಅಧಿಕ ಕಾಂಗ್ರೆಸ್ ಸದಸ್ಯರು ಬಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಬಂದಿದ್ದಾರೆ.

ಮೇಯರ್ ಸ್ಥಾನ ನಮಗೆ ಕೊಡಪ್ಪ, ವಿಘ್ನ ನಿವಾರಕನಿಗೆ ದಳಪತಿ ಪೂಜೆ

ಒಂದು ಕಡೆ ದಳಪತಿಗಳು ರೆಸಾರ್ಟ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆಯೋ ಅಧಿಕಾರ ಅವರ ಪಾಲಾಗಲಿದೆ.  ಕಲಬುರಗಿ ಪಾಲಿಕೆಯಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು.